ಶಿರಹಟ್ಟಿ: ಎಲ್ಲರೂ ಶುದ್ಧ ನೀರು ಕುಡಿಯಬೇಕು ಎಂಬ ಆಶಯದೊಂದಿಗೆ ಪ್ರಾರಂಭಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಈಗ ಗ್ರಹಣ ಹಿಡಿದಿದೆ. ಇವುಗಳ ಸ್ಥಾಪನೆಗೆ ಸರ್ಕಾರ ಲಕ್ಷಗಟ್ಟಲೆ ಅನುದಾನವನ್ನು ನೀರಿನಂತೆ ಹರಿಸಿತ್ತು. ಆದರೆ ತಾಲ್ಲೂಕಿನ ಬಹುತೇಕ ಗ್ರಾಮದ ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಶುದ್ಧ ನೀರಿಗಾಗಿ ಜನರು ಪರಿತಪಿಸುವಂತಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಇಲಾಖೆ ಬೇಜವಾಬ್ದಾರಿತನ ತೋರುತ್ತಿರುವುದರಿಂದ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಪ್ರಾರಂಭಿಸಲಾದ ಘಟಕಗಳ ಪೈಕಿ, ಸದ್ಯ ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಗ್ರಾಮಗಳ ಜನರು ಸಿಕ್ಕ ನೀರನ್ನೇ ಕುಡಿಯುವ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 56 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವು ಹೆಸರಿಗೆ ಮಾತ್ರ ಎಂಬಂತಿವೆ. ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನ ಸುಗನಹಳ್ಳಿ, ಕೊಂಚಿಗೇರಿ, ಹಡಗಲಿ, ನವೇ ಭಾವನೂರು, ಶಿವಾಜಿನಗರ, ಎಂ.ಹೊಸಳ್ಳಿ, ಹೆಬ್ಬಾಳ ಸೇರಿದಂತೆ ಒಟ್ಟು 23 ಗ್ರಾಮದಲ್ಲಿ ನೀರಿನ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದನ್ನು ಹೊರತುಪಡಿಸಿ ಏಜೆನ್ಸಿಗಳ ತಾಂತ್ರಿಕ ತೊಂದರೆಯಿಂದಾಗಿ ಕಾರ್ಯನಿರ್ವಹಿಸುವ ಬಹುತೇಕ ಘಟಕಗಳು ಸಹ ಬಂದ್ ಆಗಿದ್ದು, ಇದರಿಂದ ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆಯಾಗಿದೆ.

ಶುದ್ಧ ನೀರಿನ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆ ಪಡೆದ ಏಜೆನ್ಸಿ ಅವಧಿ ಮುಗಿದರೂ ಇದುವರೆಗೆ ಘಟಕಗಳನ್ನು ಹಸ್ತಾಂತರಿಸಿಲ್ಲ. ತಾಲ್ಲೂಕಿನಲ್ಲಿ ಶುದ್ಧ ನೀರಿನ ಘಟಕಗಳನ್ನು ಕೆ.ಎಸ್.ಮಣಿ, ಕರ್ನಾಟಕ ವಾಟರ್ ಟೆಕ್ನಾಲಜಿ, ಎ.ಬಿ.ಕಟಗಿ, ಎನ್.ಎ.ತಿರ್ಲಾಪುರ, ಸಿ.ಎನ್.ಪೂಜಾರ ಎಂಬ ಐದು ಏಜೆನ್ಸಿಗಳು ನಿರ್ವಹಣೆ ಮಾಡುತ್ತಿವೆ.

ಇದರಲ್ಲಿ ಕೆ.ಎಸ್.ಮಣಿ ಎಂಬ ಏಜೆನ್ಸಿಯು ಸುಮಾರು 22 ಘಟಕಗಳ ನಿರ್ವಹಣೆ ಟೆಂಡರ್ ಪಡೆದಿತ್ತು. ಸದ್ಯ ಅಧಿಕಾರಿಗಳ ಒತ್ತಾಯಕ್ಕೆ ಕರ್ನಾಟಕ ವಾಟರ್ ಟೆಕ್ನಾಲಜಿ ಎಂಬ ಏಜೆನ್ಸಿ ಟೆಂಡರ್ ಪಡೆದ ಕೆಲವು ಘಟಕಗಳನ್ನು ದುರಸ್ತಿ ಮಾಡುತ್ತಿದೆ. ಅವಧಿ ಮುಗಿದರೂ ಘಟಕಗಳ ಹಸ್ತಾಂತರ ಮಾಡದ ಏಜೆನ್ಸಿ ಅವುಗಳ ಪ್ರಾರಂಭಿಸುವ ಗೋಜಿಗೂ ಹೋಗಿಲ್ಲ. ಪ್ರಾರಂಭವಾದಗಿನಿಂದ ಇಲ್ಲೀವರೆಗೆ ಘಟಕ ಪ್ರಾರಂಭದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸದೆ ಇರುವುದು ವಿಪರ್ಯಾಸದ ಸಂಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ಲೋರೈಡ್ ನೀರೇ ಆಧಾರ: ಗ್ರಾಮಗಳಲ್ಲಿನ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿರುವುದರಿಂದ ಬಹುತೇಕ ಗ್ರಾಮಸ್ಥರು ಫ್ಲೋರೈಡ್ಯುಕ್ತ ನೀರನ್ನೇ ಕುಡಿಯುತ್ತಿದ್ದಾರೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಮಂಡಿನೋವು, ಎಲುಬು-ಕೀಲು ನೋವು, ಹಲ್ಲು ನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಫ್ಲೋರೈಡ್ಯುಕ್ತ ನೀರನ್ನು ಚಿಕ್ಕ ಮಕ್ಕಳು ಸೇವನೆ ಮಾಡುವುದರಿಂದ ಬೆಳವಣಿಗೆ ಕುಂಠಿತ ಹಾಗೂ ಹಲ್ಲುಗಳು ಮೇಲೆ ಶಾಶ್ವತ ಕಲೆ ಉಂಟಾಗುತ್ತಿವೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ. ಅಲ್ಲದೇ ಫ್ಲೋರೈಡ್ಯುಕ್ತ ನೀರಿನ ಸೇವನೆಯಿಂದ ಆಗುವ ಅನಾಹುತದ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಕನಿಷ್ಠ ಜಾಗೃತಿ ಸಹ ಮೂಡಿಸುತ್ತಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 6 ಶುದ್ಧ ನೀರಿನ ಘಟಕಗಳಿದ್ದು, ಅದರಲ್ಲಿ 4 ಕಾರ್ಯನಿರ್ವಹಿಸುತ್ತಿವೆ. ಒಂದು ಶೀಘ್ರ ಪ್ರಾರಂಭಗೊಳ್ಳುವ ಹಂತದಲ್ಲಿದೆ. ಸುಮಾರು 18 ವಾರ್ಡ್ಗಳನ್ನು ಒಳಗೊಂಡ ಪಂಚಾಯಿತಿಗೆ ಕೇವಲ 5 ಘಟಕಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಕೇವಲ ಮುಖ್ಯರಸ್ತೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ವಾರ್ಡ್ ನಿವಾಸಿಗಳಿಗೆ ಅದು ದೂರವಾಗಿದೆ. ಪಂಚಾಯಿತಿಗೆ ನಿರ್ವಹಣೆ ಆಗದೆ; ಅಕ್ಷಯ ಫೌಂಡೇಶನ್ ಎಂಬ ಏಜೆನ್ಸಿಗೆ ನೀಡಲಾಗಿದೆ.

ಘಟಕ ಸ್ಥಾಪನೆಗೆ ಪಂಚಾಯಿತಿ ವತಿಯಿಂದ ಜಾಗ ಹಾಗೂ ನೀರು ಕೊಟ್ಟರೆ ಏಜೆನ್ಸಿಯವರು ಜನರಿಗೆ ನೀರು ಕೊಡುತ್ತಾರೆ ಎಂಬ ಷರತ್ತಿನೊಂದಿಗೆ ನೂತನವಾಗಿ ಮೂರು ಘಟಕ ಪ್ರಾರಂಭಿಸಲಾಗುತ್ತಿದೆ. ಇವುಗಳನ್ನು ಸೇರಿ ಒಟ್ಟು 5 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಪಂಚಾಯಿತಿ ಆದಾಯ ಕಡಿಮೆಯಾದರೂ ಪಂಚಾಯಿತಿ ಅಧಿಕಾರಿಗಳು ಅದನ್ನು ನಡೆಸುವ ಕಾರ್ಯಕ್ಕೆ ಕೈ ಹಾಕುತ್ತಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಎರಡು ವಾರ್ಡ್ಗೆ ಒಂದರಂತೆ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿ, ಶುದ್ಧ ನೀರು ಒದಗಿಸಬೇಕು ಎಂಬುದು ಪಟ್ಟಣದ ಜನರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-23-1455983082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.