ಶಿರಹಟ್ಟಿ: ‘ವಿದ್ಯಾರ್ಥಿಗಳು, ಶಿಕ್ಷಕರ ಮಾರ್ಗದರ್ಶನದೊಂದಿಗೆ ಅಧ್ಯಯನಶೀಲರಾದರೆ ಮಾತ್ರ ಪಾಲಕರ ಕನಸನ್ನು ಸಾಕಾರಗೊಳಿಸಿ, ಉಜ್ವಲ ಭವಿಷ್ಯದ ರಹದಾರಿ ಕಂಡುಕೊಳ್ಳಬಹುದು’ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಇಲ್ಲಿನ ಜ. ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2025–26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆಧುನಿಕ ಯುಗದಲ್ಲಿ ಸಾಕಷ್ಟು ಉದ್ಯೋಗಾವಕಾಶ ಇದೆ. ವಿದ್ಯಾರ್ಥಿಗಳು ನಿರಾಶರಾಗದೇ, ಛಲ–ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಉದ್ಯೋಗ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಾತ್ಮಕತೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಅಧ್ಯಯ ಮಾಡಬೇಕು’ ಎಂದರು.

‘ಪರಿಶ್ರಮದಿಂದ ಯಶಸ್ಸು ಸಾಧ್ಯ. ಯಾವುದೇ ವಿಷಯದಲ್ಲಿ ಕೀಳರಿಮೆ ಇರಬಾರದು. ಸಾಮರ್ಥ್ಯ ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಎಲ್ಲರ ಅಂತರಾಳದಲ್ಲಿ ವಿಶೇಷತೆ ಅಡಗಿದ್ದು, ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಗುರಿ ತಲುಪಲು ಸಾಧ್ಯ’ ಎಂದು ಹೇಳಿದರು.

ಕನ್ನಡ ಮತ್ತು ಇತಿಹಾಸ ವಿಭಾಗಗಳು ಸಂಪಾದಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಿಪಿಐ ಬಿ.ವಿ. ನ್ಯಾಮಗೌಡರ್, ವಿ.ವಿ. ಕಪ್ಪತ್ತನವರ, ಕೆ. ಎ. ಬಳಿಗಾರ, ನಾಗರಾಜ ಲಕ್ಕುಂಡಿ, ಸಿ.ಸಿ. ನೂರಶೆಟ್ಟರ ಗೀತಾ ಹಲಸೂರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿ.ಪಿ. ಕಾಳಗಿ, ಎಸ್.ಆರ್. ಶಿರಹಟ್ಟಿ, ಹುಮಾಯೂನ್ ಮಾಗಡಿ, ಸುನೀಲ ಬುರಬುರೆ, ಗೂಳಪ್ಪ ಕರಿಗಾರ, ಅಜ್ಜಣ್ಣ ಪಾಟೀಲ, ಮಂಜುನಾಥ ಸೊಂಟನೂರ, ಎಚ್.ಎಂ. ದೇವಗಿರಿ, ನಂದಾ ಪಲ್ಲೇದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-23-1275899733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.