ಶಿರಹಟ್ಟಿ: ಬಸ್ಗಳ ಶೆಡ್ಯೂಲ್ ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲ್ಲೂಕು ಘಟಕ ಹಾಗೂ ಸ್ಥಳೀಯ ಕುಂದು ಕೊರತೆ ಹೊರಟ ಸಮಿತಿ ವತಿಯಿಂದ ಸೋಮವಾರ ಸಾರಿಗೆ ಬಸ್ ಘಟಕದ ಎದುರು ಶಾಂತಿಯುತ ಧರಣಿ ನಡೆಯಿತು.

ಸಂಘಟನೆಯ ಮುಖಂಡ ರಫೀಕ್ ಕೆರಿಮನಿ ಹಾಗೂ ಸ್ಥಳೀಯ ಕುಂದು ಕೊರತೆ ನಿವಾರಣೆ ಸಮಿತಿ ಅಧ್ಯಕ್ಷ ಅಕ್ಬರ್ ಯಾದಗಿರಿ ಮಾತನಾಡಿದರು.

ಸ್ಥಳೀಯ ಸಂಘಟನೆಗಳ ಹೋರಾಟದ ಫಲವಾಗಿ ಸಾರಿಗೆ ಬಸ್ ಡಿಪೊ ಪ್ರಾರಂಭವಾದರೂ ಪ್ರಯಾಣಿಕರಿಗೆ ಇನ್ನೂ ಸುಗಮ ಸಂಚಾರ ಸಿಕ್ಕಿಲ್ಲ. ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.

ಶಿರಹಟ್ಟಿಯಿಂದ ಕಲಬುರ್ಗಿ ಬಸವಕಲ್ಯಾಣ, ಶಿರಹಟ್ಟಿಯಿಂದ ಸಿದ್ದಾಪುರ ಶಿರಹಟ್ಟಿ-ಮಂಗಳೂರು, ಶಿವಮೊಗ್ಗ, ಶಿರಹಟ್ಟಿ-ಹುಬ್ಬಳ್ಳಿ ದಾಂಡೇಲಿ ಈ ಎಲ್ಲಾ ಮಾರ್ಗಗಳಲ್ಲಿ ಬಸ್ ಓಡಿಸಬೇಕು. ಡಿಪೊ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಇಲಾಖೆಯ ಡಿಸಿ ಸಿ ಪಿ.ವೈ ಗಡೇದ ಅವರು ಧರಣಿ ನಿರತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವೆಸೆ ನೀಡಿದರು. ಜೂನ್ 1ರೊಳಗಾಗಿ ಹೆಚ್ಚುವರಿ ಶೆಡ್ಯೂಲ್ ಒದಗಿಸುವುದಾಗಿ ತಿಳಿಸಿದರು.

ಧರಣಿ ಹಿಂಪಡೆಯುವಂತೆ ಸಿಪಿಐ ಬಿ.ವೈ.ನೇಮಗೌಡ, ಪಿಎಸ್ಐ ಈರಪ್ಪ ರಿತ್ತಿ ಪ್ರತಿಭಟನಾಕಾರರ ಮನವೊಲಿಸಿದರು.

ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ಮಹೇಶ್ವರಿ ಬೈಲಪತ್ತಾರ, ವಿಭಾಗೀಯ ಸಂಚಾರ ಅಧಿಕಾರಿ ಪಿ.ವಿ ಮೆತ್ರಿ, ಶ್ರೀನಿವಾಸ ಬಾರಬಾರ, ಶ್ರೀನಿವಾಸ ಕಪಟಕರ, ಜಾಕಿರ ಕೋಳಿವಾಡ, ಗೌಸ ಕಲಾವಂತರ, ಈರಣ್ಣ ಬಾಗೇವಾಡಿ, ಮನ್ಸೂರ ಮಕಾಂದಾರ, ಮನ್ನಾ ಡಾಲಾಯತ್, ಮಲ್ಲಿಕಾರ್ಜುನ ಕಬಾಡಿ, ಗಫಾರ ಕುದರಿ, ಮೈನು ಭುವಾಜಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-23-823172697

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.