ಅಥಣಿ: ತಾಲ್ಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನದಿ ಪಾತ್ರದಲ್ಲಿ ಕಂಡು ಬಂದ 12 ಅಡಿ ಉದ್ದದ ಮೊಸಳೆಯನ್ನು ಗ್ರಾಮದ ರೈತರು ಹಾಗೂ ಯುವಕರು ಒಗ್ಗೂಡಿ ಸೆರೆ ಹಿಡಿದು ಅಥಣಿಯ ಪ್ರಾದೇಶಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಮೊಸಳೆಯನ್ನು ಹಿಡಕಲ್ ಜಲಾಶಯದ ನೀರಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ತಿಳಿಸಿದ್ದಾರೆ.

ಬಿಸಿಲಿನ ಬೇಗೆಗೆ ಕೃಷ್ಣಾ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕೂಡ ತೀರಾ ಕಡಿಮೆಯಾಗಿರುವುದರಿಂದ ಅಲ್ಲಿರುವ ಜಲಚರಗಳು ನೀರಿನಿಂದ ಹೊರಗೆ ಬಂದು ವಲಸೆ ಹೋಗುತ್ತಿವೆ. ಆಹಾರ ಅರಸಿ ಮೊಸಳೆಗಳು ರೈತರ ಹೊಲ-ಗದ್ದೆಗಳಿಗೆ ನುಸುಳುತ್ತಿವೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕೃಷ್ಣಾ ನದಿಯಲ್ಲಿ ಹಾಗೂ ರೈತರ ಕಬ್ಬಿನ ತೋಟಗಳಲ್ಲಿ ಹಲವು ದಿನಗಳಿಂದ ಮೊಸಳೆಗಳು ಓಡಾಡುತ್ತಿವೆ. ಇದರಿಂದ ನಾಗರಿಕರಲ್ಲಿ ಭಯ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮೊಸಳೆಗಳನ್ನು ತೆರವು ಮಾಡಬೇಕು ಎಂದು ನದಿ ಪಾತ್ರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ನದಿಯಲ್ಲಿ ನೀರು ಕಡಿಮೆ ಆದಾಗ ಮೊಸಳೆಗಳು ಆಹಾರ ಅರಸಿ ವಲಸೆ ಹೋಗುವುದರಿಂದ ಜನರು ಎಚ್ಚರಿಕೆ ವಹಿಸಬೇಕು. ಬಟ್ಟೆ ತೊಳೆಯಲು, ಸ್ನಾನ ಮಾಡಲು, ದನಕರಗಳು ಮೈ ತೊಳೆಯಲು ನದಿ ನೀರಿಗೆ ಇಳಿಯಬಾರದು. ಜಾನುವಾರಿನ ಬಗ್ಗೆಯೂ ಕಾಳಜಿ ವಹಿಸಬೇಕು. ನದಿಯಿಂದ ಮೊಸಳೆಗಳು ಹೊರಗೆ ಬಂದಾಗ ಅರಣ್ಯ ಇಲಾಖೆ ಕಚೇರಿಗೆ ಇಲ್ಲವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕು’ ಎಂದು ರಾಕೇಶ ಅರ್ಜುನವಾಡ ಸಲಹೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-867875910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.