ಮಂಗಳವಾರ, ಫೆಬ್ರವರಿ 25, 2020
19 °C
ಡಿಜಿಎಂ ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಕಲಿತ ವಿದ್ಯಾ ಸಂಸ್ಥೆ ಸದಾಸ್ಮರಣೀಯ: ಶಿವಾನಂದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕಲಿತ ವಿದ್ಯಾಸಂಸ್ಥೆಗಳು ಸದಾ ಸ್ಮರಣೀಯವಾಗಿರುತ್ತದೆ ಹಾಗೂ ಜೀವನದುದ್ದಕ್ಕೂ ಇಲ್ಲಿ ಕಲಿತ ಶಿಕ್ಷಣವೇ ಬೆಳಕಾಗಿರುತ್ತದೆ’ ಎಂದು ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಡಿಜಿಎಂ ಆರ್ಯುವೇದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ 16ನೇ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಡಿಜಿಎಂ ಆಯುರ್ವೇದ ಕಾಲೇಜಿನಿಂದ ಕಳೆದ ನಾಲ್ಕು ದಶಕಗಳಲ್ಲಿ 1500ಕ್ಕೂ ಹೆಚ್ಚು ವೈದ್ಯರು ಹೊರಬಂದಿದ್ದಾರೆ. ದೇಶ– ವಿದೇಶಗಳಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆ ತರುವ ಸಂಗತಿ’ ಎಂದು ಸ್ವಾಮೀಜಿ ಹೇಳಿದರು.

‘ಆಯುರ್ವೇದ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆಯುರ್ವೇದ ಔಷಧಗಳ ಬಳಕೆ ಮತ್ತು ಜಾಗೃತಿ ಹೆಚ್ಚಬೇಕು’ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಸುಜಾತಾ ಪಾಟೀಲ ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಚಾರ್ಯ ಡಾ.ಜಿ.ಬಿ ಪಾಟೀಲ ಅವರು ‘ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರತಿ ಸಮಾವೇಶದಲ್ಲಿ ಅಭಿಮಾನದಿಂದ ಒಂದುಗೂಡುವುದು ಮಾದರಿಯಾಗಿದೆ’ ಎಂದರು.

ಪ್ರಾಚಾರ್ಯ ಡಾ.ಉಮೇಶ ಪುರದ ಅವರು ಅಧ್ಯಕ್ಷತೆ ವಹಿಸಿದ್ದರು. ‘ಸಂಸ್ಥೆಯಲ್ಲಿ ಕಲಿತಿರುವ ನೂರಾರು ವೈದ್ಯರುಗಳು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ, ಸಾಮಾಜಿಕ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಅನುಪಮವಾದದ್ದು’ ಎಂದರು.

ಸಂಸ್ಥೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಿಜಿಎಂ 15 ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಡಾ.ಗುರುಪ್ರಸಾದ ಡೆಸ್ಟಿನಿ, ರಫೀಜ್, ಇದ್ದರು. ಡಿ.ಎಂ.ಪಾಟೀಲ ಸ್ವಾಗತಿಸಿದರು. ಡಾ.ವೀಣಾ ದತ್ತವಾಡಕರ ನಿರೂಪಿಸಿದರು. ಚೌಡಪ್ಪಲವರ ವಂದಿಸಿದರು. ದಾವಣಗೆರೆಯ ಡೆಸ್ಟಿನಿ ಇವೆಂಟ್‌ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)