ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶ್ರಾವಣ ಮಾಸ ಸಂಸ್ಕೃತಿಯ ಪ್ರತೀಕ’

Published : 13 ಆಗಸ್ಟ್ 2024, 15:47 IST
Last Updated : 13 ಆಗಸ್ಟ್ 2024, 15:47 IST
ಫಾಲೋ ಮಾಡಿ
Comments

ಶಿರಹಟ್ಟಿ: ‘ಶ್ರಾವಣ ಮಾಸದ ಹಬ್ಬ ಹರಿದಿನಗಳು ಸಂಸ್ಕೃತಿ, ಸಂಸ್ಕಾರದ ಪ್ರತೀಕವಾಗಿದ್ದು, ಮನುಷ್ಯನಲ್ಲಿ ಉತ್ಸಾಹ ಹಾಗೂ ಮನಶುದ್ಧೀಕರಣ ಮಾಡುತ್ತವೆ’ ಎಂದು ಉಪನ್ಯಾಸಕ ಸಿದ್ಧಲಿಂಗೇಶ ಹಲಸೂರು ಹೇಳಿದರು.

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತ ಹಬ್ಬಗಳ ತವರೂರ ಎಂದೇ ಬಿಂಬಿತವಾಗಿದ್ದು, ಸಾಂಸ್ಕೃತಿಕ ಶ್ರೀಮಂತಿಕೆ ದೇಶವಾಗಿದೆ. ಶ್ರಾವಣ ಮಾಸ ಎಲ್ಲ ಮಾಸಗಳಿಗಿಂತ ಶ್ರೇಷ್ಠ. ಈ ಮಾಸದಲ್ಲಿ ಹಮ್ಮಿಕಳ್ಳುವ  ಪುರಾಣ ಪ್ರವಚನಗಳಿಂದ ಮಾನವ ಜನ್ಮಕ್ಕೆ ಅತ್ಯಗತ್ಯವಿರುವ ಮಾನವೀಯ ಮೌಲ್ಯಗಳನ್ನು ತಿಳಿಯಬಹುದು. ಇದರಿಂದ ಸಮಾಜದಲ್ಲಿ ಸಮಾನತೆ ಹಾಗೂ ಮಾದರಿಯುತ ಜೀವನ ನಡೆಸಲು ಸಾಧ್ಯ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಅಳವಂಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಣ್ಣ ಹಾಲಸ್ವಾಮಿಗಳ ಸಾನ್ನಿಧ್ಯ ವಹಿಸಿದ್ದರು. ಎಂ.ಸಿ.ಪಾಟೀಲ್, ಸಿ.ಟಿ ಹುಡ್ಕನ್ನವರ್ ತಾ.ಪಂ ಮಾಜಿ ಅಧ್ಯಕ್ಷ ಕಂಠಿ ಗೌಡ್ರು, ಗಿರೀಶ್ ಕೋಡಬಾಳ, ಎಂ.ಬಿ.ಹಾವೇರಿ, ಷನ್ಮುಖಗೌಡ ಪಾಟೀಲ, ಯಚ್ಚರಪ್ಪ ಪತ್ತಾರ, ಶಿವನಗೌಡ ಕಂಠಿಗೌಡ್ರ ಶಿವಣ್ಣ ಹಾವೇರಿ, ಚನವೀರಗೌಡ ಅಂಗಡಿ, ಪುಟನಗೌಡ ಪುಟಮಲ್ಲಪ್ಪನವರ, ಬಸಯ್ಯ ಮಠದ, ಅಂದಪ್ಪ ಮೆಣಸಿನಕಾಯಿ, ಈರಣ್ಣ ಸಣ್ಣಮನಿ, ಜಿ.ಎನ್.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT