ಗಜೇಂದ್ರಗಡ (ಗದಗ ಜಿಲ್ಲೆ): ಸಮೀಪದ ಸೂಡಿ ಗ್ರಾಮದ ಸುಂದರ ಕೆತ್ತನೆ ಕುಸುರಿ ಹೊಂದಿರುವ ನಾಗಕುಂಡ ಮೆಟ್ಟಿಲು ಬಾವಿಯನ್ನು ರಾಜ್ಯ ಸರ್ಕಾರದ ಸ್ಮಾರಕಗಳ ದತ್ತು ಯೋಜನೆ ಅಡಿಯಲ್ಲಿ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸಲಾಗಿದ್ದು, ಪ್ರವಾಸಿ ತಾಣವಾಗಿಸುವ ಪ್ರಯತ್ನ ನಡೆದಿದೆ.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮೂಲಕ ರಾಜಶ್ರೀ ಪಿನ್ನಮನೇನಿ ಅವರು ತಮ್ಮ ತಂದೆ ದಿ.ಡಾ.ಸುಬ್ಬಾರಾವ್ ದೇವಿನೇನಿ ಅವರ ಸ್ಮರಣಾರ್ಥ ನಾಗಕುಂಡ ಮೆಟ್ಟಿಲು ಬಾವಿ ಜೀರ್ಣೋದ್ಧಾರಕ್ಕೆ ಬೆಂಬಲ ನೀಡಿದ್ದಾರೆ.

ಶಿಥಿಲಗೊಂಡಿದ್ದ ಅವಶೇಷಗಳ ಜಾಗ, ಸುತ್ತಲಿನ ಪ್ರದೇಶ ಅಭಿವೃದ್ಧಿ ಪಡಿಸಲಾಗಿದೆ. ಕಲ್ಲಿನ ನೆಲಹಾಸಿನ ಪಾದಚಾರಿ ರಸ್ತೆ, ಉದ್ಯಾನ ಅಭಿವೃದ್ಧಿಪಡಿಸಿ, ಕಾಂಪೌಂಡ್ ನಿರ್ಮಿಸಲಾಗಿದೆ. ಬೀದಿ ದೀಪ ಅಳವಡಿಸಲಾಗಿದೆ.

ಮೊದಲ ಹಂತದಲ್ಲಿ ನಾಗಕುಂಡ ಮೆಟ್ಟಿಲು ಬಾವಿ ಜೀರ್ಣೋದ್ಧಾರ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಜೋಡು ಕಳಸದ ಗುಡಿ, ಗ್ರಾಮದಲ್ಲಿರುವ ಸ್ಮಾರಕಗಳನ್ನು ಸಂಪರ್ಕಿಸಲು ಮಾರ್ಗ ನಿರ್ಮಿಸುವ ಯೋಜನೆ ಒಳಗೊಂಡಿದೆ ಎಂದು ಡೆಕ್ಕನ್ ಹೆರಿಟೇಜ್ ಫೌಂಡೇಶನ ಪ್ರತಿನಿಧಿಗಳು ತಿಳಿಸಿದ್ದಾರೆ.

ಕಲ್ಯಾಣ ಚಾಲುಕ್ಯರ ಸಹೋದರಿ ರಾಣಿ ಅಕ್ಕಾದೇವಿ ಆಳ್ವಿಕೆಯಲ್ಲಿ ಸೂಡಿ ಗ್ರಾಮ ದೊಡ್ಡ ಅಗ್ರಹಾರ, ನಾಣ್ಯಗಳನ್ನು ತಯಾರಿಸುತ್ತಿದ್ದ ಟಂಕ ಶಾಲೆಯಾಗಿತ್ತು. ಶಾಸನಗಳಲ್ಲಿ ‘ಸೂಂಡಿ’ ಎಂದು ಉಲ್ಲೇಖಿತವಾಗಿ ಕಿಸುಕಾಡು-70ಕ್ಕೆ ಸೇರಿದ ಸೂಡಿ, ಪಂಡಿತರು, ಶಕ್ತಿ ಆರಾಧಕರು, ಕಾಳಾಮುಖರು, ಭೈರವರು, ಪಾಶುಪತರು ಇದ್ದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ.

ಚಾಲುಕ್ಯರ ಕಾಲದಲ್ಲಿ ವೈಭವದ ಕೊಳವಾಗಿದ್ದ ಸುಮಾರು 80 ಅಡಿ ಸುತ್ತಳತೆ, ಸುಮಾರು 50 ಅಡಿ ಆಳವಿರುವ ವಿಶಿಷ್ಟವಾದ ನಾಗರ ಬಾವಿಯನ್ನು ನಾಗಕುಂಡ, ರಸ್ತಾಬಾವಿ, ಪಾಂಡವರ ಬಾವಿ ಎಂದು ಕರೆಯುತ್ತಾರೆ. ಸಾಮಂತನಾದ ನಾಗದೇವನು ಇದನ್ನು ನಿರ್ಮಿಸಿದ ಕಾರಣ ನಾಗರಬಾವಿ, ನಾಗಕುಂಡ ಎಂದು ಹೆಸರು ಪಡೆದುಕೊಂಡಿದೆ. ಈ ಬಗೆಗಿನ ಶಾಸನವು ಇಲ್ಲಿರುವ ಜೋಡು ಕಳಸದ ಗುಡಿಯಲ್ಲಿದೆ.

ಗದಗ ಜಿಲ್ಲೆಯಲ್ಲಿನ ಅನೇಕ ಸ್ಮಾರಕಗಳನ್ನು ಪುರಾತತ್ವ ಇಲಾಖೆಯಿಂದ ಅಭಿವೃದ್ಧಿ ಮಾಡುತ್ತಿದ್ದೇವೆ. ಬಹುರಾಷ್ಟ್ರೀಯ ಕಂಪನಿಯವರು ಸಂಘ-ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆ

–ಕೊಟ್ರೇಶ ವಿಭೂತಿ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.