ತಗ್ಗಿದ ತುಂಗಭದ್ರಾ ಪ್ರವಾಹ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

7
gadag district mundaragi

ತಗ್ಗಿದ ತುಂಗಭದ್ರಾ ಪ್ರವಾಹ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Published:
Updated:
Deccan Herald

ಮುಂಡರಗಿ: ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಪ್ರವಾಹ ಶುಕ್ರವಾರ ತಗ್ಗಿದ್ದು, ನದಿದಂಡೆಯ ವಿಠಲಾಪುರ, ಬಿದರಳಳ್ಳಿ, ಗುಮ್ಮಗೋಳ ಹಾಗೂ ಹಳೆಸಿಂಗಟಾಲೂರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಗುರುವಾರ ನದಿ ನೀರು ಗ್ರಾಮದ ಕೆಲವು ಮನೆಗಳಿಗೆ ನುಗ್ಗಿತ್ತು. ನೂರಾರು ಎಕರೆ ಪ್ರದೇಶ ಜಲಾವೃತವಾಗಿತ್ತು. ರಸ್ತೆ ಸಂಪರ್ಕ ಕಡಿತಗೊಂಡು ಜನರು ಆತಂಕಗೊಂಡಿದ್ದರು. ವಿಠಲಾಪುರ ಗ್ರಾಮದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ವಿಠಲಾಪುರ ಹಾಗೂ ಬಿದರಳ್ಳಿ ನಿವಾಸಿಗಳು ತಮ್ಮ ಗ್ರಾಮಗಳಿಗೆ ಮರಳಿದರು.
ಕೊರ್ಲಹಳ್ಳಿ, ಗಂಗಾಪೂರ ರಸ್ತೆ, ಹಳೆಸಿಂಗಟಾಲೂರ ರಸ್ತೆಗಳು ನದಿ ನೀರಿನಲ್ಲಿ ಮುಳುಗಿದ್ದವು. ಸದ್ಯ ನೀರು ಇಳಿದಿದ್ದು, ವಾಹನಗಳು ಸಂಚರಿಸುತ್ತಿವೆ. ಕೊರ್ಲಹಳ್ಳಿ ಮದಲಗಟ್ಟಿ ಆಂಜನೇಯ ದೇವಸ್ಥಾನದ ಬಳಿ ನೀರಿನ ಹರಿವು ಕಡಿಮೆಯಾಗಿದೆ.

ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಮುಂಡರಗಿ ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ, ಶಾಸಕ ರಾಮಣ್ಣ ಲಮಾಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡರಿ, ಸಿಪಿಐ ಮಂಜುನಾಥ ನಡುವಿನಮನಿ ಅವರು ಗುರುವಾರ ಸಂಜೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

ಆ.15ರಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ನದಿ ನೀರಿನ ಹರಿವು ಮತ್ತು ಮಟ್ಟ ಹೆಚ್ಚಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !