ಮುಂಡರಗಿ: ‘ವೀರಶೈವ ಹಾಗೂ ಲಿಂಗಾಯತ ಧರ್ಮಗಳು ಒಂದೆಯಾಗಿದ್ದು, ಎರಡರ ತತ್ವ ಸಿದ್ಧಾಂತಗಳಲ್ಲಿ ಗೊಂದಲಗಳಿಲ್ಲ’ ಎಂದು ಅನ್ನದಾನೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲ್ಲೂಕು ಘಟಕವು ಸೋಮವಾರ ಇಲ್ಲಿಯ ಅನ್ನದಾನೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕುಲಕಸುಬು, ಉದ್ಯೋಗ ಮೊದಲಾದ ಕಾರಣಗಳಿಂದ ವೀರಶೈವ ಹಾಗೂ ಲಿಂಗಾಯತಗಳಲ್ಲಿ ಒಡೆದು ಹೋಗಿರುವ ವಿವಿಧ ಉಪ ಪಂಗಡಗಳೆಲ್ಲ ಒಂದಾಗಬೇಕು ಎಂದರು.

ಸಮಾರಂಭದ ನೇತೃತ್ವ ವಹಿಸಿದ್ದ ಕಲಕೇರಿ-ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಲಿಂಗಾಯತವು ಸರ್ವ ಜನಾಂಗದ ಹಿತ ಬಯಸುವ ಧರ್ಮವಾಗಿದೆ ಎಂದರು.

ಜ.ಅ.ವಿದ್ಯಾ ಸಮಿತಿ ಆಡಳಿತಾಧಿ ಕಾರಿ ಬಿ.ಜಿ.ಜವಳಿ ಮಾತನಾಡಿ, ಜಗತ್ತಿನ ಹಲವು ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರಗಳಿವೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಸಮಾರಂಭವನ್ನು ಉದ್ಘಾಟಿಸಿದರು. ತಾಲ್ಲೂಕು ಘಟಕದ ಅದ್ಯಕ್ಷ ಎಸ್.ಎನ್.ಡೋಣಿ ಅದ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಹಿರೇಮಠ, ವಿಜಯಲಕ್ಷ್ಮಿ ಮಾನ್ವಿ ಮಾತನಾಡಿದರು. ಬಿಇಒ ಗಂಗಾಧರ ಅಣ್ಣಿಗೇರಿ, ಜಾಫರ್ ಬಚೇರಿ, ಡಿ.ಎಸ್.ಬಸೇಗೌಡರ, ಎಂ.ಪಿ.ಶೀರನಹಳ್ಳಿ ಹಾಗೂ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಗುಡಿಮನಿ, ಎಸ್.ವಿ.ಪಾಟೀಲ, ಶಿವಪ್ಪ ಅಂಕದ, ಲಿಂಗಶಟ್ಟರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-23-1023598012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.