ಶನಿವಾರ, ಅಕ್ಟೋಬರ್ 24, 2020
22 °C
ನಿರಂತರ ಮಳೆಗೆ ನೆನೆದಿದ್ದ ಮನೆಯ ಗೋಡೆ: ವಿವಿಧೆಡೆ 20 ಮನೆ ಕುಸಿತ

ಗೋಡೆ ಕುಸಿದು ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಣ: ಮಾಡಲಗೇರಿ ಗ್ರಾಮದಲ್ಲಿ ನಿರಂತರ ಮಳೆಗೆ ನೆನೆದಿದ್ದ ಮನೆಯ ಗೋಡೆ ಕುಸಿದುಬಿದ್ದು ವೃದ್ಧೆಯೊಬ್ಬರು ಮಣ್ಣಿನಡಿ ಸಿಲುಕಿ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಗ್ರಾಮದ ಶಂಕ್ರವ್ವ ನಿಂಗನಗೌಡ ಭೀಮನಗೌಡ್ರ(70) ಮೃತರು. ಬೆಳಗ್ಗೆ ಬಹಿರ್ದೆಸೆಗೆ ಹೋಗಿ ಬರುವ ವೇಳೆ ಎದುರು ಮನೆ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಅವರ ಬಳಿಯೇ ಇದ್ದ ಆಡು ಕೂಡ ಈ ಘಟನೆಯಲ್ಲಿ ಸಾವನ್ನಪ್ಪಿದೆ.

ತಕ್ಷಣ ನೆರೆಹೊರೆಯವರು ರಕ್ಷಣೆ ಧಾವಿಸಿ ಮಣ್ಣಿನಲ್ಲಿ ಸಿಲುಕಿದ್ದ ವೃದ್ಧೆಯನ್ನು ಹೊರ ತೆಗೆದರು. ಬಳಿಕ ಚಿಕಿತ್ಸೆಗೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೃದ್ಧೆ ಮೃತಪಟ್ಟಿದ್ದರು. ತಾಯಿಯನ್ನು ಕಳೆದುಕೊಂಡ ಇಬ್ಬರು ಪುತ್ರರು, ಪುತ್ರಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ: ವೃದ್ಧೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಂದಾಯ ನಿರೀಕ್ಷಕ ನಿಂಗಪ್ಪ ಅಡಿವೆಣ್ಣ ವರ, ಗ್ರಾಮ ಲೇಕ್ಕಾಧಿಕಾರಿ ಎನ್.ಆರ್.ಕನೋಜಿ, ಹಾಗೂ ಪಿಎಸ್‍ಐ ವಿನೋದ ಪೂಜಾರಿ ಮಾಡಲಗೇರಿ ಗ್ರಾಮದ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಳೆ ಯಿಂದಾಗಿ ಗ್ರಾಮದಲ್ಲಿ ಬಿದ್ದಿರುವ 20ಕ್ಕೂ ಹೆಚ್ಚು ಮನೆಗಳನ್ನು ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ಕೊಡುವುದರ ಜೊತೆಗೆ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು