ಸೋಮವಾರ, ಮೇ 10, 2021
19 °C

ಕಪ್ಪತಗುಡ್ಡಕ್ಕೆ ಮತ್ತೆ ಬೆಂಕಿ: ನೂರಾರು ಹೆಕ್ಟೇರ್‌ ಅರಣ್ಯ ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಂಬಳ (ಗದಗ): ಚಿಕ್ಕವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿ ಶು‌ಕ್ರವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಕಿ ತಗುಲಿದ್ದು, ನೂರಾರು ಹೆಕ್ಟೇರ್‌ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. 24 ಗಂಟೆಗಳ ನಂತರ ಬೆಂಕಿ ತಹಬದಿಗೆ ಬಂದಿದ್ದು ವಿವಿಧ ರೀತಿಯ ಗಿಡಮೂಲಿಕೆಯ ಸಸ್ಯಗಳು ನಾಶವಾಗಿವೆ.

ವರ್ಷದ ಆರಂಭದಿಂದ ಈವರೆಗೆ ಅಂದಾಜು 2 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ. ಪದೇ ಪದೇ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ನಡೆಯುತ್ತಿದ್ದರೂ, ಬೆಂಕಿ ಹಚ್ಚಿದ ಕಿಡಗೇಡಿಗಳ ಬಂಧನವಾಗಿಲ್ಲ ಎಂದು ಪರಿಸರವಾದಿಗಳು, ವಿವಿಧ ಸಂಘಟನೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ವಿವಿಧ ಪ್ರದೇಶಗಳಿಗೆ ವ್ಯಾಪಿಸುತ್ತಿದೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು