ಬೆಳವಣಿಕಿ (ರೋಣ): ಸಮೀಪದ ಯಾವಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹೊನ್ನಕೇರಿ ಮಲ್ಲಯ್ಯ ಶಿಬಾರಗಟ್ಟಿ, ಬಸವಣ್ಣ ಮೂರ್ತಿ, ನಾಗದೇವತೆ, ಮಲ್ಲಯ್ಯನ ಕಂಚಿನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಏ.27ರಿಂದ 29ರವರೆಗೆ ನಡೆಯಲಿವೆ.

ಸಿದ್ದಯ್ಯ ಹಿರೇಮಠ ನೇತೃತ್ವ ವಹಿಸುವರು. ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೈಲಾಪೂರ ಬಸಪ್ಪ ಪೂಜಾರ ಉಪಸ್ಥಿತರಿರುವರು.

ಏ.27ರಂದು ಬೆಳಿಗ್ಗೆ 9ಕ್ಕೆ ಕುಂಭಮೇಳ, ಡೊಳ್ಳಿನ ಮೇಳ, ಕರಡಿಮಜಲು, ಭಜನಾ ಮೇಳದೊಂದಿಗೆ, ಗುರುದ್ವಯರ ನೇತೃತ್ವದಲ್ಲಿ ಮೂರ್ತಿ ಪುರಪ್ರವೇಶ ನಂತರ ಮಹಾಪ್ರಸಾದ ನೆರವೇರುವುದು. ರಾತ್ರಿ 9.30ಕ್ಕೆ ಬೀರಲಿಂಗೇಶ್ವರ ಭರಮಲಿಂಗೇಶ್ವರ ತಂಡದವರಿಂದ ಶಾಂಭವಿ ಕಲಾ ತಂಡದವರಿಂದ ಬಯಲಾಟ ಪದ ಕಾರ್ಯಕ್ರಮ ನಡೆಯಲಿದೆ.

ಏ.28ರಂದು ಮೂರ್ತಿಗಳ ಜಲವಾಸ, ವಸ್ತ್ರಾಭರಣ, ಜ್ಞಾನವಾಸ, ಪುಷ್ಪವಾಸ, ಶಯನವಾಸ, ವಾಸ್ತುಶಾಂತಿ, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಏ.29ರಂದು ಬೆಳಿಗ್ಗೆ 6ಕ್ಕೆ ಚನ್ನಮಲ್ಲ ಶಿವಾಚಾರ್ಯ ಅವರಿಂದ ಎಲ್ಲ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ, ನಂತರ ರುದ್ರಾಭಿಷೇಕ, ನವಗ್ರಹ ಶಾಂತಿ, ಮುಂತಾದ ಕಾರ್ಯಕ್ರಮ ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-23-1231606047

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.