‘ಶಿಕ್ಷಣದಿಂದ ಬದುಕು ಎದುರಿಸುವ ಸಾಮರ್ಥ್ಯ’

7

‘ಶಿಕ್ಷಣದಿಂದ ಬದುಕು ಎದುರಿಸುವ ಸಾಮರ್ಥ್ಯ’

Published:
Updated:
Deccan Herald

ಚನ್ನಪಟ್ಟಣ: ನಾವೆಲ್ಲ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಚನ್ನಾಂಬಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮ ನಿಂಗೇಗೌಡ ತಿಳಿಸಿದರು.

ಪಟ್ಟಣದ ಚನ್ನಾಂಬಿಕ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ‘ಸ್ವಾಗತ ಸಮಾರಂಭ ಹಾಗೂ ಜ್ಞಾನಜ್ಯೋತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ಕಲಿಕೆಯಲ್ಲಿ ಕ್ರಿಯಾಶೀಲತೆ, ನಾಯಕತ್ವದ ಗುಣ, ಬದುಕನ್ನು ಎದುರಿಸುವ ಸಾಮರ್ಥ್ಯ ಹೊಂದಲು ಶಿಕ್ಷಣ ಅತ್ಯಗತ್ಯ ಎಂದರು.

ಹಿರಿಯ ಜನಪದ ಗಾಯಕ ಚೌ.ಪು. ಸ್ವಾಮಿ ಮಾತನಾಡಿ, ‘ದೇಶವನ್ನು ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳ ಬಗೆಗೆ ಯುವಕರು ಗಮನ ಹರಿಸಬೇಕು. ನಮಗೂ ದೇಶಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸಬಾರದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿಜಯ್ ರಾಂಪುರ ಮಾತನಾಡಿ, ವಿದ್ಯಾರ್ಥಿ ಜೀವನ ತಪಸ್ಸಿನ ಹಾಗೆ.  ವಿದ್ಯಾರ್ಥಿ ಜೀವನದಲ್ಲಿ ಮೈಮರೆತು ಕೆಟ್ಟವಿಚಾರಗಳ ಕಡೆಗೆ ಮನಸ್ಸು ಹರಿಯಬಿಟ್ಟರೆ ಭವಿಷ್ಯದ ಜೀವನ ಕಷ್ಟವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಎಲ್.ಶೇಖರ್, ಉಪನ್ಯಾಸಕರಾದ ಜ್ಯೋತಿ, ನಿವೇದಿತಾ, ಶಾಹಿಸ್ತಾ ಖಾನಂ, ಸೀಮಾ, ದಿನೇಶ್, ಕೃಷ್ಣಯ್ಯ, ಲೋಕೇಶ್, ರಮೇಶ್, ಅಶ್ವಿನಿ, ರಮ್ಯ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !