8ರಿಂದ 26ರವರೆಗೆ 18 ಪುರಾಣಗಳ ಪರಿಚಯ

7

8ರಿಂದ 26ರವರೆಗೆ 18 ಪುರಾಣಗಳ ಪರಿಚಯ

Published:
Updated:

ಶಿವಮೊಗ್ಗ: ಶ್ರಾವಣ ಮಾಸ ಹಾಗೂ ಸಂಸ್ಕೃತೋತ್ಸವ ಪ್ರಯುಕ್ತ ಆ. 8ರಿಂದ 26ರವರೆಗೆ 18 ಪುರಾಣಗಳ ಪರಿಚಯ ಉಪನ್ಯಾಸ ಮತ್ತು ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.

ಅರ್ಚಕ ವೃಂದ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಮಿತಿ ಸಹಯೋಗದಲ್ಲಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 8ರಂದು ಆರಂಭವಾಗುವ ಈ ಕಾರ್ಯಕ್ರಮವನ್ನು ದಕ್ಷಿಣ ಪ್ರಾಂತ್ಯದ ಸಂಸ್ಕೃತ ಭಾರತಿ ಅಧ್ಯಕ್ಷ ಟಿ.ಎನ್. ಪ್ರಭಾಕರ್ ಉದ್ಘಾಟಿಸುವರು. ದೇವಸ್ಥಾನ ಅಭಿವೃದ್ಧಿ ದತ್ತಿ ಅಧ್ಯಕ್ಷ ಎನ್. ಉಮಾಪತಿ ಅಧ್ಯಕ್ಷತೆ ವಹಿಸುವರು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಅ.ಪ. ರಾಮಭಟ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆ. 9ರಂದು ಬ್ರಹ್ಮಪುರಾಣ, ಆ. 10 ರಂದು ಮಾರ್ಕಂಡೇಯ ಪುರಾಣ, ಆ. 11 ರಂದು ಭಾಗವತ, ಆ. 12ರಂದು ಕೂರ್ಮ, ಆ. 13ರಂದು ಬ್ರಹ್ಮವೈವರ್ಥ, ಆ. 14ರಂದು ವಾಮನ, ಆ. 15ರಂದು ನಾರದ, ಆ. 16ರಂದು ವಿಷ್ಣು, ಆ. 17ರಂದು ಪದ್ಮ, ಆ. 18 ರಂದು ಮತ್ಸ್ಯ, ಆ. 19ರಂದು ವಾಯು, ಆ. 20ರಂದು ಬ್ರಹ್ಮಾಂಡ, ಆ. 21ರಂದು ಭವಿಷ್ಯ, ಆ. 22ರಂದು ವರಹ, ಆ. 23ರಂದು ಲಿಂಗ, ಆ. 24ರಂದು ಗರುಡ, ಆ. 25ರಂದು ಅಗ್ನಿ, ಆ. 26ರಂದು ಸ್ಕಂದ ಪುರಾಣ ಉಪನ್ಯಾಸಗಳು ನಡೆಯಲಿವೆ ಎಂದರು.

ಬಾಳಗಾರು ಜಯತೀರ್ಥಾಚಾರ್, ಎಚ್.ಆರ್. ವಾಸುದೇವ, ಪ್ರಕಾಶ್ ವೆಂಕವಳ್ಳಿ, ನರಹರಿ ಭಟ್ಟರು, ವಿನಾಯಕ, ಗೋಪಾಲಕೃಷ್ಣ, ಸತ್ಯನಾರಾಯಣ ಭಟ್ಟರು, ಹಂದಲಸು ರಾಘವೇಂದ್ರ ಭಟ್ಟರು, ರುಕ್ಮಿಣಿನಾಯಕ್, ಶಿವಾನಂದ ಭಟ್ಟರು, ಮಂಜುನಾಥ ಭಟ್ಟರು, ಕೃಷ್ಣುಮೂರ್ತಿ ಉಡುಪ, ಡಾ.ಸುಮಿತ್ರ ಭಟ್, ಕುಷ್ಟಗಿ ವಾಸುದೇವ ಮೂರ್ತಿ ಉಪನ್ಯಾಸ ನೀಡುವರು.

ಸಂಸ್ಕೃತ ಭಾರತಿ ಮುಖ್ಯಸ್ಥ ಅ.ನಾ. ವಿಜಯೇಂದ್ರ ಮಾತನಾಡಿ, ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಸೆ. 2ರಂದು ಬೆಳಿಗ್ಗೆ 10.30ಕ್ಕೆ ಮಹಿಳೆಯರಿಗೆ ಬೆಣ್ಣೆ ಕಡಿಯುವ ಸ್ಪರ್ಧೆ, ಸೆ. 3ರಂದು ಜೋಗುಳ ಹಾಡುವ ಸ್ಪರ್ಧೆ ಮತ್ತು ಶಂಖನಾದ ಸ್ಪರ್ಧೆ ಆಯೋಜಿಸಲಾಗಿದೆ. ಬಲಮುರಿ ಗಣಪತಿ ದೇವಸ್ಥಾನದಲ್ಲಿ ಈ ಸ್ಪರ್ಧೆ ನಡೆಯಲಿವೆ. ಹೆಸರು ನೋಂದಾಯಿಸಲು ಆ. 25 ಕಡೆಯ ದಿನ. ಹೆಚ್ಚಿನ ವಿವರಗಳಿಗೆ 08182-276021 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ. ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ಅಧ್ಯಕ್ಷ ಎನ್.ವಿ. ಶಂಕರನಾರಾಯಣ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !