ಗಾಂಧಿ ಜೀವನವೇ ಒಂದು ಸಂದೇಶ: ಗಂಗಾಧರ್

7

ಗಾಂಧಿ ಜೀವನವೇ ಒಂದು ಸಂದೇಶ: ಗಂಗಾಧರ್

Published:
Updated:
Deccan Herald

ರಾಮನಗರ: ‘ಮಹಾತ್ಮ ಗಾಂಧೀಜಿ ಅವರ ಜೀವನವೇ ಒಂದು ಸಂದೇಶ. ಅಹಿಂಸಾ ಮಾರ್ಗದ ಮೂಲಕ ಯಾವುದನ್ನಾದರೂ ಸರಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ ವಿಶ್ವ ಮೆಚ್ಚಿನ ಮಹಾನ್ ನಾಯಕ ಅವರು’ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್ ಹೇಳಿದರು.

ಮಂಗಳವಾರ ನಗರದ ರೈಲ್ವೇ ನಿಲ್ದಾಣ ವೃತ್ತದ ಬಳಿ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಳ ಜೀವನದ ಮೂಲಕ ಇಡೀ ದೇಶದ ಮೆಚ್ಚುಗೆ ಗಳಿಸಿದ ಬಾಪು ಅವರು ವಿಶ್ವಕ್ಕೆ ಅಹಿಂಸಾ ಮಾರ್ಗವನ್ನು ಪರಿಚಯಿಸಿದರು. ಸಮಾಜದಲ್ಲಿ ಯಾವುದೇ ಬದಲಾವಣೆಗಳಾದಾಗ ಅಲ್ಲಿ ಹಿಂಸೆ, ನರಮೇದಗಳು ಸರ್ವೇ ಸಾಮಾನ್ಯ ಎಂಬ ಕಾಲಘಟ್ಟದಲ್ಲಿ ಅಹಿಂಸಾ ಮಾರ್ಗದ ಮೂಲಕವೂ ಬದಲಾವಣೆ ತರಬಹುದು ಎಂಬುದನ್ನು ತೋರಿಸಿಕೊಟ್ಟರು ಎಂದು ಬಣ್ಣಿಸಿದರು.

ಅಹಿಂಸಾ ತತ್ವವನ್ನು ಪ್ರತಿಪಾದಿಸುವ ಉದ್ದೇಶದಿಂದ ಗಾಂಧೀಜಿ ಜನ್ಮದಿನದಂದು ಯಾವುದೇ ಪ್ರಾಣಿ ಹಿಂಸೆ ನಡೆಯಬಾದರು ಎಂದು ಸರ್ಕಾರ ಮಾಂಸ ಮಾರಾಟವನ್ನು ನಿಷೇಧಿಸಿದೆ. ಆದರೆ ಅಲ್ಲಲ್ಲಿ ಮಾಂಸ ಮಾರಾಟ ನಡೆಯುತ್ತಲೇ ಇದೆ. ಇದು ಗಾಂಧೀಜಿ ಅವರ ತತ್ವಕ್ಕೆ ವಿರುದ್ಧವಾಗಿದ್ದು, ಬಾಪೂಜಿ ಸಲ್ಲಿಸುವ ಗೌರವವೇ ಇದು? ಎಂಬುದನ್ನು ಸಾರ್ವಜನಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ ಮಾತನಾಡಿ, ದೇಶ ಇಬ್ಬಾಗವಾದ ಸಂದರ್ಭದಲ್ಲಿ ಭಾರತದಲ್ಲೇ ಉಳಿದುಕೊಂಡ ಮುಸ್ಲಿಮರ ರಕ್ಷಣೆಗೆ ನಿಂತ ಬಾಪೂಜಿ ಅವರು ಅಲ್ಪಸಂಖ್ಯಾತರಿಗೆ ರಾಷ್ಟ್ರದಲ್ಲಿ ಪ್ರಾತಿನಿಧ್ಯ ದೊರಕಿಸಿದರು. ದೇಶದಲ್ಲೇ ಉಳಿದುಕೊಂಡ ಅಲ್ಪಸಂಖ್ಯಾತರನ್ನು ದೇಶಪ್ರೇಮಿಗಳು ಎಂದು ಕರೆದು ನಮ್ಮ ಬೆನ್ನಿಗೆ ನಿಂತರು ಎಂದರು.

ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಮನಸ್ಥಿತಿಯುಳ್ಳವರು ಪ್ರಸ್ತುತ ದೇಶವನ್ನು ಆಳುತ್ತಿದ್ದಾರೆ. ಅಹಿಂಸೆಗೆ ಪ್ರಚೋದನೆ ನೀಡುತ್ತಾ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಗಾಳಿಗೆ ದೂರುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮುಖಂಡರಾದ ನರಸಿಂಹಮೂರ್ತಿ, ಜಯರಾಮು, ಪಾಪಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ನಿಜಾಮುದ್ದೀನ್ ಷರೀಫ್, ನಗರ ಘಟಕದ ಅಧ್ಯಕ್ಷ ಇಮ್ರಾನ್ ಖಾನ್, ಸಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !