ಸರ್ಕಾರ ಬೀಳುವುದಿಲ್ಲ, ಕೆಲವರು ಹಗಲು ಕನಸು ಕಾಣುತ್ತಿದ್ದಾರೆ: ದೇವೇಗೌಡ

7

ಸರ್ಕಾರ ಬೀಳುವುದಿಲ್ಲ, ಕೆಲವರು ಹಗಲು ಕನಸು ಕಾಣುತ್ತಿದ್ದಾರೆ: ದೇವೇಗೌಡ

Published:
Updated:

ಶಿವಮೊಗ್ಗ: ಅಧಿಕಾರಕ್ಕೆ ಬಂದ ದಿನಗಳಿಂದಲೂ ಸರ್ಕಾರ ಈಗ ಬೀಳುತ್ತದೆ. ಆಗ ಬೀಳುತ್ತದೆ ಎಂದು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಪರೋಕ್ಷವಾಗಿ ಬಿಜೆಪಿ ಮುಖಂಡರನ್ನು ಕುಟುಕಿದರು.

ಮಲೆನಾಡು ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ರಜತ ಮಹೋತ್ಸವ ಕಾರ್ಯಕಮ ಉದ್ಘಾಟಿಸಿ ಅವರು ಮಾತನಾಡಿದರು.

224 ಸದಸ್ಯ ಬಲದ ವಿಧಾನಸಭೆಯಲ್ಲಿ 37 ಶಾಸಕರನ್ನು ಹೊಂದಿರುವ ಪಕ್ಷದ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ, ಅವರಿಗೆ ಯಾವುದೋ ದೈವ ಬಲ, ಗುರು ಬಲ ಇದೆ ಎಂದು ಅರ್ಥ. ಈ ಸರ್ಕಾರ ಬೀಳುವುದಿಲ್ಲ. ಕಳೆದ ಮೂರು ತಿಂಗಳಿನಿಂದ ಸರ್ಕಾರ ಬೀಳುತ್ತದೆ ಎಂದು ಮಹೂರ್ತ ಇಟ್ಟುಕೊಂಡು ಕಾಯುತ್ತಿದ್ದಾರೆ. ಅವರಿಗೆ ನಿರಾಸೆ ಖಚಿತ ಎಂದರು.

ಕಾಂಗ್ರೆಸ್ ದೊಡ್ಡ ಪಕ್ಷ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಆಂತರಿಕ ವಿಚಾರ ಸರಿಮಾಡಿಕೊಳ್ಳುವ ಶಕ್ತಿ ಆ ಪಕ್ಷಕ್ಕೆ ಇದೆ. ಮೈತ್ರಿ ಸರ್ಕಾರಕ್ಕೆ ದೊಡ್ಡ ಹೊಣೆಗಾರಿಕೆ ಇರುವುದು ಎರಡೂ ಪಕ್ಷಗಳಿಗೆ ಗೊತ್ತಿದೆ. ಹೊಂದಾಣಿಕೆ ಇರುವುದರಿಂದಲೇ ಸಾಲ ಮನ್ನಾದಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಲು, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಕಾನೂನು ಜಾರಿಗೆ ತರಲು ಸಾಧ್ಯವಾಗಿದೆ ಎಂದರು.

ಮಾಧ್ಯಮಗಳಿಗೆ ಬೇರೆ ಕೆಲಸ ಇಲ್ಲವೇ?:

ಹೆಲಿಪ್ಯಾಡ್‌ಗೆ ಬಂದಿಳಿದ ದೇವೇಗೌಡರು ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಸರ್ಕಾರ ಬೀಳುವುದರ ಕುರಿತು ಚಿಂತಿಸುವ ಮಾಧ್ಯಮಗಳು ಸರ್ಕಾರ ಸಾಧನೆ ಕುರಿತು ಚಕಾರ ಎತ್ತುವುದಿಲ್ಲ. ಜಾರಿಗೆ ತಂದ ಸಾಲ ಮನ್ನಾ, ಜನತಾಸರ್ಶನ ಕುರಿತು ಚರ್ಚಿಸುತ್ತಿಲ್ಲ ಎಂದು ಹರಿಹಾಯ್ದರು.

ಉಪ ಮುಖ್ಯಮಂತ್ರಿ ಪರಮೇಶ್ವರ್ ಭೇಟಿ, ಜಾರಕಿಹೊಳಿ ಸಹೋದರರ ಪ್ರಕರಣ ಕುರಿತು ಕೇಳಿದ ಪ್ರಶ್ನೆಗಳಿಗೆ, ಇದು ನಿಮಗೆ ಅವಶ್ಯ ಸುದ್ದಿಯೇ ಎಂದು ಮರು ಪ್ರಶ್ನಿಸಿದರು. 

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !