10 ಗಂಟೆ ಬೆಂಗಳೂರು– ಮಂಗಳೂರು ಹೆದ್ದಾರಿ ಬಂದ್‌

7

10 ಗಂಟೆ ಬೆಂಗಳೂರು– ಮಂಗಳೂರು ಹೆದ್ದಾರಿ ಬಂದ್‌

Published:
Updated:

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಕೊಲ್ಲಹಳ್ಳಿ ಬಳಿ ಗ್ಯಾಸ್‌ ಟ್ಯಾಂಕರ್ ಹಾಗೂ ಕಂಟೈನರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಸುಮಾರು 10 ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಅಪಘಾತ ಸಂಭವಿಸಿದ ಸ್ಥಳದ ಒಂದು ಬದಿಯಲ್ಲಿ ಕಾಫಿ ತೋಟ, ಮತ್ತೊಂದು ಬದಿ ಆಳದಲ್ಲಿ ಭತ್ತದ ಗದ್ದೆ ಇದುದ್ದರಿಂದ ವಾಹನಗಳಿಗೆ ಮುಂದೆ ಸಾಗಲು ಜಾಗವಿರಲಿಲ್ಲ. ಹೀಗಾಗಿ ಹೆದ್ದಾರಿಯ ಎರಡು ಬದಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸ್ಥಳಕ್ಕೆ ಪೊಲೀಸ್‌ ವಾಹನ ಹೋಗುವುದಕ್ಕೂ ಕೂಡ ಸಾಧ್ಯವಾಗದಷ್ಟು ಟ್ರಾಫಿಕ್‌ ಜಾಮ್‌ ಆಗಿತ್ತು. ಇನ್‌ಸ್ಪೆಕ್ಟರ್‌ ವಸಂತ್‌, ಪಿಎಸ್‌ಐಗಳಾದ ರಾಘವೇಂದ್ರ, ಬ್ಯಾಟರಾಯಗೌಡ ಹಾಗೂ ಸಿಬ್ಬಂದಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು. ಅಪಘಾತಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸುವಷ್ಟರಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಾಗಿತ್ತು.

ಅಪಘಾತದಲ್ಲಿ ಟ್ಯಾಂಕರ್‌ ಚಾಲಕ ತಮಿಳುನಾಡಿನ ಅಬ್ದುಲ್‌ ರೆಹಮಾನ್‌ (28) ಸಾವನ್ನಪ್ಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !