ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಒಂದೇ ದಿನ 1013 ಮಂದಿ ಕೋವಿಡ್‌ನಿಂದ ಗುಣಮುಖ

Last Updated 8 ಮೇ 2021, 12:46 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಆರ್ಭಟದ ನಡುವೆಯೂ ಗುಣಮುಖರಾಗುವವರ ಸಂಖ್ಯೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಒಂದೇ ದಿನ ಶನಿವಾರ 1013 ಮಂದಿ ಆರೋಗ್ಯದಲ್ಲಿ ಚೇತರಿಕೆಯಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1288 ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 15 ಮಂದಿ ಮೃತಪಟ್ಟಿದ್ದಾರೆ. ಕಾಯಿಲೆಗೆ ಈವರೆಗೆ ಅಸುನೀಗಿದವರ ಸಂಖ್ಯೆ 675.ಒಟ್ಟು ಸೋಂಕಿತರ ಸಂಖ್ಯೆ 51,871ಕ್ಕೆ ಏರಿಕೆಯಾಗಿದೆ. 13722 ಸಕ್ರಿಯ ಪ್ರಕರಣಗಳ ಪೈಕಿ 105 ಮಂದಿ ತೀವ್ರ ನಿಗಾ ಘಟಕಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಆಲೂರು ತಾಲ್ಲೂಕಿನಲ್ಲಿ 16, ಅರಕಲಗೂಡು 88, ಅರಸೀಕೆರೆ 95, ಬೇಲೂರು 147, ಚನ್ನರಾಯಪಟ್ಟಣ 117, ಹಾಸನ 664, ಹೊಳೆನರಸೀಪುರ 66, ಸಕಲೇಶಪುರ 87, ಇತರೆ ಜಿಲ್ಲೆಯ 8 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT