ಭಾನುವಾರ, ಸೆಪ್ಟೆಂಬರ್ 15, 2019
26 °C
ಹಾಸನಾಂಬೆ ದರ್ಶನೋತ್ಸವ ಪೂರ್ವ ಸಿದ್ಧತೆಗಾಗಿ ಡಿಸಿ ಭೇಟಿ, ಪರಿಶೀಲನೆ

12 ದಿನ ಅಧಿದೇವತೆ ದರ್ಶನಕ್ಕೆ ಅವಕಾಶ

Published:
Updated:
Prajavani

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ದೇವಾಲಯ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದಿನ ತಿಂಗಳು ಹಾಸನಾಂಬ ಮಹೋತ್ಸವ ಇರುವುದರಿಂದ ಪೂರ್ವ ಸಿದ್ಧತೆ ಹೇಗಿರಬೇಕೆಂಬ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಏನೆಲ್ಲಾ ಯೋಜನೆ ರೂಪಿಸಬೇಕು, ದೇವಾಲಯದ ಆವರಣ ಸ್ವಚ್ಛತೆ, ರಸ್ತೆ ಸಂಚಾರ ಮತ್ತಿತರ ವಿಷಯ ಕುರಿತು ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಈ ಬಾರಿ ಹಾಸನಾಂಬ ದರ್ಶನೋತ್ಸವ ಅ. 17 ರಿಂದ 29 ರ ವರೆಗೆ ಇರಲಿದೆ. ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜ್, ತಹಶೀಲ್ದಾರ್ ಮೇಘನಾ, ನಗರಸಭೆ ಆಯುಕ್ತ ಪರಮೇಶ್, ಮುಜರಾಯಿ ಇಲಾಖೆ ತಹಶೀಲ್ದಾರ್ ಶಾರದಾಂಬ ಇದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗಿರೀಶ್, ಜಾತ್ರಾ ಮಹೋತ್ಸವಕ್ಕೂ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ಮಹೋತ್ಸವ ವೇಳೆ ಯಾವುದೇ ನೂಕು ನುಗ್ಗಲು, ಗೊಂದಲ ನಡೆಯದಂತೆ ಅಚ್ಚುಕಟ್ಟಾಗಿ ನಡೆಸಲು ಎಲ್ಲರ ಸಹಕಾರ ಕೋರುವುದಾಗಿ ತಿಳಿಸಿದರು.

Post Comments (+)