150 ಮನೆ ಜಲಾವೃತ: ರೈಲ್ವೆ ಸಿಬ್ಬಂದಿ ರಕ್ಷಣೆ

7

150 ಮನೆ ಜಲಾವೃತ: ರೈಲ್ವೆ ಸಿಬ್ಬಂದಿ ರಕ್ಷಣೆ

Published:
Updated:
Deccan Herald

ಹಾಸನ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ.

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಮಾರ್ಗವಾಗಿ ಹರಿಯುವ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಗ್ರಾಮದೊಳಗೆ ನೀರು ನುಗ್ಗಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಹಲವು ಮನೆಗಳು ಕುಸಿದಿವೆ.

ಮನೆ ಬಿಟ್ಟು ಬರಲು ನಿರಾಕರಿಸಿದ ಕೆಲವರನ್ನು ಶಾಸಕ ಎ.ಟಿ.ರಾಮಸ್ವಾಮಿ ಮನವೊಲಿಸಿ ಕರೆ ತಂದರು. ತೆಪ್ಪ ಬಳಸಿ ಎಲ್ಲರನ್ನೂ ಸ್ಥಳಾಂತರ ಮಾಡಲಾಯಿತು.

ಗಂಜಿಕೇಂದ್ರವಾದ ಯಾತ್ರಿನಿವಾಸಕ್ಕೂ ನೀರು ನುಗ್ಗಿದ ಪರಿಣಾಮ ಅಲ್ಲಿಂದ ಶಾಲೆಗಳಿಗೆ ನಿರಾಶ್ರಿತರನ್ನು ಸ್ಥಳಾಂತರಿಸಲಾಯಿತು. ಗುರುವಾರ ಗಂಜಿ ಕೇಂದ್ರ ಸಮುದಾಯ ಭವನಕ್ಕೆ ನೀರು ನುಗ್ಗಿತು. ರಾಮನಾಥಪುರಕ್ಕೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್‌ ಮುಳುಗಡೆ ಆಗಿರುವುದರಿಂದ, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

12 ಮಂದಿ ರೈಲ್ವೆ ಸಿಬ್ಬಂದಿ ರಕ್ಷಣೆ:
ಸಕಲೇಶಪುರ ಶಿರಾಡಿ ಘಾಟ್‌ನಲ್ಲಿ ಗುಡ್ಡಕುಸಿತ ಮುಂದುವರಿದಿದೆ. ಯಡಕುಮರಿ ರೈಲು ನಿಲ್ದಾಣ ಮೇಲೆ ಗುಡ್ಡದ ಮಣ್ಣು ಕುಸಿದು ಸಿಲುಕಿಕೊಂಡಿದ್ದ 12 ರೈಲ್ವೆ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹೆಲಿಕಾಪ್ಟರ್‌ ಮೂಲಕ ರಕ್ಷಣೆಗೆ ಹವಾಮಾನ ಪರಿಸ್ಥಿತಿ ಅಡ್ಡಿಯುಂಟಾಗುವ ಹಿನ್ನೆಲೆಯಲ್ಲಿ ಕಾಗಿನೆರೆ ಮೂಲಕ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಟ್ರಕ್ಕಿಂಗ್‌ ಪರಿಣತರು, ಪೊಲೀಸರು ಕಾರ್ಯಾಚರಣೆ ನಡೆಸಿ, ಎಲ್ಲರನ್ನು ಸುರಕ್ಷಿತವಾಗಿ ಸಕಲೇಶಪುರ ಪಟ್ಟಣಕ್ಕೆ ತಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !