ಕ್ರಿಕೆಟ್‌ ಅಭಿಮಾನ; 200 ಮಿಲಿ ಚಿನ್ನದ ವಿಶ್ವಕಪ್‌ ತಯಾರಿಸಿದ ಕುಶಲಕರ್ಮಿ

ಗುರುವಾರ , ಜೂಲೈ 18, 2019
29 °C
ಹಿಂದಿನ ವಿಶ್ವಕಪ್‌ನಲ್ಲಿ ಮಿಶ್ರಲೋಹದ ಕಪ್‌ ತಯಾರಿಕೆ

ಕ್ರಿಕೆಟ್‌ ಅಭಿಮಾನ; 200 ಮಿಲಿ ಚಿನ್ನದ ವಿಶ್ವಕಪ್‌ ತಯಾರಿಸಿದ ಕುಶಲಕರ್ಮಿ

Published:
Updated:
Prajavani

ಹಾಸನ: ಕ್ರಿಕೆಟ್‌ ಮೇಲಿನ ಅಭಿಮಾನದಿಂದ ನಗರದ ಕುಶಲಕರ್ಮಿ ಎಚ್‌.ಎಲ್‌.ನರೇಂದ್ರ ಅವರು 200 ಮಿಲಿ ಚಿನ್ನದಲ್ಲಿ ವಿಶ್ವಕಪ್‌ ತಯಾರಿಸಿದ್ದಾರೆ.

ಒಂದೇ ದಿನದಲ್ಲಿ ₹ 600 ವೆಚ್ಚದಲ್ಲಿ 200 ಮಿಲಿ, 1/4 ಇಂಚು ಎತ್ತರದ ವಿಶ್ವಕಪ್‌ ಅನ್ನು ಕುಸುರಿಯಿಂದ ಸುಂದರವಾಗಿ ಸಿದ್ದಪಡಿಸಿದ್ದಾರೆ.

ನರೇಂದ್ರ ಅವರು ಈ ಹಿಂದೆ ತಮ್ಮ ಕೈಚಳಕದಿಂದ ಸಾಧನೆ ಮಾಡಿ, ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಹಿಂದಿನ ವರ್ಲ್ಡ್‌ ಕಪ್‌ನಲ್ಲಿ ಮಿಶ್ರ ಲೋಹದಲ್ಲಿ 4 ಗ್ರಾಂ ತೂಕದ ಕಪ್ ತಯಾರಿಸಿ, ಸಾರ್ವಜನಿಕರ ಗಮನ ಸೆಳೆದಿದ್ದರು.

‘ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ ಗೆಲ್ಲಬೇಕು. ಈ ಕಾರಣದಿಂದ ಮಾದರಿ ವಿಶ್ವಕಪ್‌ ತಯಾರಿಸಿದ್ದೇನೆ. ಕಪ್‌ ಗೆದ್ದರೆ ಖುದ್ದು ಭೇಟಿಯಾಗಿ ಈ ಮಾದರಿ ಕಪ್‌ ನೀಡುತ್ತೇನೆ’ ಎನ್ನುತ್ತಾರೆ ನರೇಂದ್ರ.

ಭಾರತ ತಂಡ ಗೆದ್ದು ವಿಶ್ವಕಪ್‌ ತರಲಿ ಎಂದು ನರೇಂದ್ರ ಕಾಳಿಕಾಂಬೆಗೂ ಹರಕೆ ಹೊತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !