ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ಕಳವು ಪ್ರಕರಣ: ₹ 35 ಲಕ್ಷ ಚಿನ್ನಾಭರಣ ವಶ

12 ಆರೋಪಿಗಳ ಬಂಧನ, ಕಾರು, ಲಾರಿ, ದ್ವಿಚಕ್ರ ವಾಹನ ವಶ
Last Updated 28 ಸೆಪ್ಟೆಂಬರ್ 2021, 16:06 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ವಿವಿಧೆಡೆ ನಡೆದಿದ್ದ 20 ಕಳವು ಪ್ರಕರಣದಲ್ಲಿ 12 ಆರೋಪಿಗಳನ್ನು ಬಂಧಿಸಿ, ₹35 ಲಕ್ಷ ಬೆಲೆಯ ಚಿನ್ನಾಭರಣ ಹಾಗೂ ವಾಹನವನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಐದು ದ್ವಿಚಕ್ರವಾಹನ, ಎರಡು ಲಾರಿ ಮತ್ತು ಎರಡು ಕಾರು ವಶಪಡಿಸಿಕೊಳ್ಳಲಾಗಿದೆ. ಕಳವು ಪ್ರಕರಣ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಹಗಲು-ರಾತ್ರಿ ಪೊಲೀಸ್‌ ಗಸ್ತು ಹೆಚ್ಚಿಸಿದ್ದು, 10 ಚೆಕ್‌ಪೋಸ್ಟ್‌ ಸ್ಥಾಪಿಸಿತಪಾಸಣೆ ಮಾಡಲಾಗುತ್ತಿದೆ. ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ 112ಗೆ ಮಾಹಿತಿ ನೀಡಬೇಕೆಂದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಹೇಳಿದರು.

ಹೊಳೆನರಸೀಪುರದ ಪ್ರವೀಣ್‍ಕುಮಾರ್ ಅವರ ಮನೆಯ ಬಾಗಿಲ ಬೀಗ ಮುರಿದು ಬೀರುವಿನಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ನ ಮುತ್ತಿನ ಓಲೆ, ಏಳು ಗ್ರಾಂ ತೂಕದಏಳು ಉಂಗುರ ಹಾಗೂ 100 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮಿದೇವಿಯ ಮುಖವಾಡವನ್ನು ಕಳವು ಮಾಡಲಾಗಿತ್ತು.ಸೆ. 5 ರಂದು ಮೈಸೂರು ಕಡೆ ತೆರಳಲು ಬಸ್‍ನಿಲ್ದಾಣದ ಬಳಿ ನಿಂತಿದ್ದ ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ ₹ 1.54 ಲಕ್ಷ ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.

ಆಲೂರು ತಾಲ್ಲೂಕು ಕಾಮತಿ ಕೂಡಿಗೆ ಬಳಿ ಎತ್ತಿನಹೊಳೆ ಕಾಮಗಾರಿ ಕ್ಯಾಂಪ್‍ನಿಂದ ಸೆ. 5 ರಂದು
ಟಿಪ್ಪರ್ ಲಾರಿ ಕಳವು ಮಾಡಲಾಗಿತ್ತು.ತಮಿಳುನಾಡಿನ ವೆಲ್ಲೂರು ಜಿಲ್ಲೆಯ ದಮ್ಮವಟ್ಟಮ್ ಗ್ರಾಮದ
ಆರೋಪಿಯನ್ನು ₹10 ಲಕ್ಷ ಬೆಲೆಯ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹಳೇಬೀಡು ಹೊಯ್ಸಳ ಬಡಾವಣೆಯ ಟಿಪ್ಪರ್‌ನಲ್ಲಿ190 ಲೀಟರ್ ಡೀಸೆಲ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆಮಾಡಲಾಯಿತು. ಬೇರೆ, ಬೇರೆ ಜಿಲ್ಲೆಯಲ್ಲಿ ಡೀಸೆಲ್ ಕಳವು ಮಾಡುತ್ತಿದ್ದ ಹಾಗೂ ಈ ಕೃತ್ಯಕ್ಕೆ ₹7 ಲಕ್ಷ ಬೆಲೆಯ ಅಶೋಕ ಲೈಲ್ಯಾಂಡ್ ಬಳಸುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಬಂಧಿತರಿಂದ ₹10ಸಾವಿರ ಬೆಲೆಯ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಳೇಬೀಡು ಹನಿಕೆ ಗ್ರಾಮದ ಮಂಜುನಾಥ ಮನೆಯಲ್ಲಿ ₹12.50 ಲಕ್ಷ ಬೆಲೆಯ ಚಿನ್ನಾಭರಣ ಕಳವಾಗಿತ್ತು. ಚಿಕ್ಕಮಗಳೂರಿನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ದಾವಣಗೆರೆಜಿಲ್ಲೆ ಸಂತೆಬೆನ್ನೂರು ಗ್ರಾಮದವರಾಗಿದ್ದು, ಚಾಪೆ, ರೋಲ್‍ಗೋಲ್ಡ್ ಚಿನ್ನದ ಆಭರಣ ಮಾರಾಟ ಮಾಡುವ ನೆಪದಲ್ಲಿ ಬೀಗಹಾಕಿದ್ದ ಮನೆಗಳ ಕಳ್ಳತನ ಮಾಡುತ್ತಿದ್ದರು. ₹12.50 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.

ಹೊಳೆನರಸೀಪುರ, ಆಲೂರು, ಚನ್ನರಾಯಪಟ್ಟಣ, ಹಳೇಬೀಡು, ಕೊಣನೂರು ಪೊಲೀಸರ ತಂಡ ಕಳವು
ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT