ಭಾನುವಾರ, ಆಗಸ್ಟ್ 14, 2022
28 °C

ಗ್ರಾ.ಪಂ 3 ಸದಸ್ಯ ಸ್ಥಾನ ಹರಾಜು: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಣನೂರು: ಗ್ರಾಮ ಪಂಚಾಯಿತಿ ಮೂರು ಸ್ಥಾನಗಳನ್ನು ಹರಾಜು ಮಾಡಲಾಗಿದೆ ಎನ್ನಲಾದ ವಿಡಿಯೊಗಳು ಹರಿದಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಲಿ ಗ್ರಾಮಕ್ಕೆ ನಿಗದಿಯಾಗಿರುವ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ಕ್ಷೇತ್ರಗಳಿಗೆ ಮೀಸಲಾಗಿದ್ದ 3 ಸದಸ್ಯ ಸ್ಥಾನಗಳನ್ನು ಹರಾಜಿನ ಮೂಲಕ ಅವಿರೋಧವಾಗಿ ಆಯ್ಕೆ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡಿರುವುದನ್ನು ಕುರಿತು ತಹಶೀಲ್ದಾರ್‌ರ ಮೌಖಿಕ ಆದೇಶವನ್ನು ಅನುಸರಿಸಿ ರಾಮನಾಥಪುರ ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿ ಹರೀಶ್ ಸಲ್ಲಿಸಿದ ದೂರಿನ ಮೇರೆಗೆ ಭಾನುವಾರ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಾಜಿನ ಮೂಲಕ ಸದಸ್ಯ ಸ್ಥಾನಗಳನ್ನು ಪಡೆದಿದ್ದಾರೆನ್ನಲಾದ ಬಿಳಗುಲಿ ಗ್ರಾಮದ ಬಿ.ಜೆ.ರಾಮೇಗೌಡ, ವರದಮ್ಮ ಮತ್ತು ಸ್ವಾಮಿ ಸೇರಿದಂತೆ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸುಮಾರು 30 ರಿಂದ 40 ಜನರ ವಿರುದ್ಧ ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಲಾಗಿದೆ.

ಬಿಳಗುಲಿ ಗ್ರಾಮದ್ದು ಎನ್ನಲಾಗಿರುವ ವಿಡಿಯೊ ತುಣುಕಿನಲ್ಲಿ ಪ್ರಕಾರ ಮೂರು ಸದಸ್ಯ ಸ್ಥಾನಗಳು 13.11 ಲಕ್ಷ, 8.11 ಲಕ್ಷ ಮತ್ತು 3.26 ಲಕ್ಷಕ್ಕೆ ಹರಾಜು ಮಾಡಲಾಗಿದೆ.

‘ಗ್ರಾ.ಪಂ. ಚುನಾವಣಾಧಿಕಾರಿ ಹರೀಶ್‌ ನೀಡಿದ ದೂರಿನಂತೆ ಪಂಚಾಯಿತಿ ಸ್ಥಾನ ಹರಾಜು ವಿಷಯಕ್ಕೆ ಸಂಬಂಧಿಸಿದಂತೆ ಹಲವು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪಿಎಸ್‌ಐ ಅಜಯ್‌ಕುಮಾರ್ ಡಿ.ಎನ್. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.