ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಒಂದೇ ದಿನ 30 ಸೋಂಕಿತರು ಸಾವು

Last Updated 17 ಮೇ 2021, 12:47 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಎರಡನೇ ಅಲೆ ಊಹೆಗೂ ನಿಲುಕದಂತೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ಸಾವಿನ ಪ್ರಕರಣ ವರದಿಯಾಗಿದೆ.

ಸೋಮವಾರ ಒಂದೇ ದಿನ 1384 ಕೊರೊನಾ ಪಾಸಿಟಿವ್ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 30
ಸೋಂಕಿತರು ಮೃತಪಟ್ಟಿದ್ದಾರೆ. ಇದು ಮೊದಲ ಬಾರಿಗೆ ಗರಿಷ್ಠಮಟಕ್ಕೆ ಏರಿದೆ. ಇದರ ನಡುವೆ ಚೇತರಿಕೆ ಪ್ರಮಾಣದಲ್ಲೂ ಗಣನೀಯಏರಿಕೆಯಾಗಿದೆ. 2510 ಮಂದಿ ಆರೋಗ್ಯದಲ್ಲಿ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸ್ವಲ್ಪಸಮಾಧಾನ ತಂದಿದೆ.

ಒಟ್ಟು ಸೋಂಕಿತರ ಸಂಖ್ಯೆ 65693ಕ್ಕೆ ಏರಿಕೆಯಾಗಿದೆ.ಕಾಯಿಲೆಯಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 831. 14944 ಸಕ್ರಿಯ ಪ್ರಕರಣಗಳ ಪೈಕಿ 135 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 49918 ಮಂದಿಚೇತರಿಸಿಕೊಂಡಿದ್ದಾರೆ.

ಹೊಸದಾಗಿ ಆಲೂರು ತಾಲ್ಲೂಕಿನ 55, ಅರಕಲಗೂಡು 143,ಅರಸೀಕೆರೆ 204, ಬೇಲೂರು 164, ಚನ್ನರಾಯಪಟ್ಟಣ 237, ಹಾಸನ 337, ಹೊಳೆನರಸೀಪುರ 144, ಸಕಲೇಶಪುರ 100 ಜನರಿಗೆ ಕೊರೊನಾ ಸೋಂಕು ತಗುಲಿದೆ.ಹಾಸನ ತಾಲ್ಲೂಕಿನ 11, ಅರಸೀಕೆರೆ 4, ಅರಕಲಗೂಡು,ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ ತಲಾ ಮೂವರು, ಸಕಲೇಶಪುರ ಇಬ್ಬರು ಹಾಗೂ ಆಲೂರಿನ ಒಬ್ಬರುಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT