ನಿಲ್ದಾಣದಲ್ಲೇ 4 ತಾಸು ಕಾದ ಪ್ರಯಾಣಿಕರು

7
ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತ

ನಿಲ್ದಾಣದಲ್ಲೇ 4 ತಾಸು ಕಾದ ಪ್ರಯಾಣಿಕರು

Published:
Updated:
Deccan Herald

ಹಾಸನ: ಸಕಲೇಶಪುರ ತಾಲ್ಲೂಕು ಯಡಕುಮೇರಿ– ಶಿರುವಾಗಿಲು ನಡುವಿನ ರೈಲು ಮಾರ್ಗದಲ್ಲಿ ಮಣ್ಣು ಕುಸಿದ ಪರಿಣಾಮ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಸನ ರೈಲ್ವೆ ನಿಲ್ದಾಣದಲ್ಲಿ 4 ತಾಸು ಕಾಯಬೇಕಾಯಿತು.

ಯಡಕುಮೇರಿ ಬಳಿ ಗುಡ್ಡದ ಮಣ್ಣು ಕುಸಿದ ಕಾರಣ ಬೆಂಗಳೂರು–ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಿ, ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ಬೆಳಿಗ್ಗೆ 10.40ಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಬಂದ ರೈಲನ್ನು ನಿಲ್ದಾಣದಲ್ಲಿಯೇ ನಿಲ್ಲಿಸಲಾಯಿತು. ಕಾರ್ಯಾಚರಣೆ ಎರಡು ತಾಸು ಕಳೆದರೂ ಮುಗಿಯಲಿಲ್ಲ. 

ಸುಬ್ರಹ್ಮಣ್ಯ, ಉಡುಪಿ, ಮಂಗಳೂರು, ಕಾರವಾರಕ್ಕೆ ಹೋಗಬೇಕಿದ್ದ 480ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾರಿಗೆ ಸಂಸ್ಥೆಯ 9 ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು. ಟಿಕೆಟ್ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !