ಚನ್ನರಾಯಪಟ್ಟಣ: ಪಟ್ಟಣದ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ 72ನೇ ವರ್ಷದ ಗಣಪತಿ ಮೂರ್ತಿಯನ್ನು ಸೋಮವಾರ ಪ್ರತಿಷ್ಠಾಪಿಸಲಾಯಿತು.
ಕಲಾವಿದ ಸಿ.ವಿ. ಪ್ರಸನ್ನ ತಯಾರಿಸಿರುವ 9 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಿ, ಮಂಗಳವಾದ್ಯದ ನಾದದೊಂದಿಗೆ ಅರ್ಚಕ ಬಾಲಕೃಷ್ಣ ಭಟ್ ಪೂಜೆ ನೆರವೇರಿಸುವುದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗಣಪತಿ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಗಣಪತಿ ಸಮುದಾಯ ಭವನದ ಅಭಿವೃದ್ಧಿಗೆ ಪುರಸಭೆ ವತಿಯಿಂದ ಅನುದಾನ ನೀಡಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಅಕ್ಟೋಬರ್ 6 ರಂದು ನನ್ನ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ಮೇಳವನ್ನು ಗಣಪತಿ ಪೆಂಡಾಲ್‍ನಲ್ಲಿ ಏರ್ಪಡಿಸಲಾಗುವುದು’ ಎಂದು ಹೇಳಿದರು.
ಪ್ರಸನ್ನಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಆಶೋಕ್ ಮಾತನಾಡಿ, 48 ದಿನ ಮಧ್ಯಾಹ್ನದ ದಾಸೋಹ ನಡೆಯಲಿದೆ. ಸೆಪ್ಟೆಂಬರ್ 23 ರಿಂದ ಬೆಳಿಗ್ಗೆ ಉಚಿತ ಯೋಗ ಶಿಬಿರ, ಅಕ್ಟೋಬರ್ 2 ರಂದು ರಕ್ತದಾನ ಶಿಬಿರ ಏರ್ಪಡಿಸಲಾಗುವುದು ಎಂದರು.ಮಹದೇವ್ ತಂಡದ ಕಲಾವಿದರು ಭಕ್ತಿಗೀತೆ, ಭಾವಗೀತೆ ಗಾಯನ ನಡೆಸಿಕೊಟ್ಟರು.
ಕಾಂಗ್ರೆಸ್ ಮುಖಂಡ ಎಚ್.ಎಸ್. ವಿಜಯಕುಮಾರ್ ಮಾತನಾಡಿದರು. ಕತ್ತರಿಘಟ್ಟ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ, ಡಿವೈಎಸ್‍ಪಿ ಪಿ. ರವಿಪ್ರಸಾದ್, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಂ. ವಸಂತ್, ಮುಖಂಡ ಎ.ಸಿ. ಆನಂದ ಕುಮಾರ್, ರಾಜ್ಯರೈತಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಮಹದೇವ್, ಸಿ.ಕೆ. ಕೃಷ್ಣ, ಸಿ.ವೈ. ಸತ್ಯನಾರಾಯಣ್, ಸಿ.ಎಸ್. ಮನೋಹರ್, ನಂಜುಂಡಮೈಮ್, ರವೀಂದ್ರ, ಸಿ.ಡಿ. ರಾಜಶೇಖರ್, ಪುರಸಭಾ ಸದಸ್ಯರಾದ ಎಚ್.ಎನ್. ನವೀನ್, ಮೋಹನ್, ಸಿ.ಎನ್. ಶಶಿಧರ್, ನವೊದಯ ವಿದ್ಯಾ ಸಂಘದ ಪದಾಧಿಕಾರಿಗಳಾದ ಸುರೇಶ್, ಸಿ.ಎಸ್. ಆದಿಶೇಷಕುಮಾರ್, ಕುಂಬಾರಹಳ್ಳಿ ರಮೇಶ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.