ಸೋಮವಾರ, ಜೂನ್ 14, 2021
26 °C
ಇಬ್ಬರ ಸಾವು, 129 ಜನರಿಗೆ ಕೊರೊನಾ ಸೋಂಕು ದೃಢ

ಹಾಸನ: ಚೇತರಿಕೆ ಪ್ರಮಾಣ ಏರಿಕೆ, 502 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಸತೀಶ್‌

ಹಾಸನ: ಜಿಲ್ಲೆಯಲ್ಲಿ ಗುರುವಾರ 129 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ದಾಟಿದೆ. ಮತ್ತೊಂದೆಡೆ ಗುಣವಾದರ ಸಂಖ್ಯೆಯೂ ಏರುತ್ತಿದ್ದು, ಒಂದೇ ದಿನ 502 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಬ್ಬರ ಸಾವಿನೊಂದಿಗೆ ಮೃತರ ಸಂಖ್ಯೆಯೂ 118ಕ್ಕೆ ತಲುಪಿದೆ. ಸದ್ಯ 4115 ಪ್ರಕರಣಗಳು ವರದಿಯಾಗಿದ್ದು, 2190 ಮಂದಿ ಗುಣಮುಖರಾಗಿ ತೆರಳಿದ್ದಾರೆ. 1807 ಮಂದಿ ನಾನಾ ಆಸ್ಪತ್ರೆಗಳು, ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿ ದಾಖಲಾಗಿದ್ದಾರೆ. ಹಲವರು ಹೋಂ ಐಸೋಲೇಷನ್‌ನಲ್ಲಿದ್ದಾರೆ. 52 ಸೋಂಕಿತರು ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನರಾಯಪಟ್ಟಣದ 80 ವರ್ಷದ ವೃದ್ಧೆ, ಹೊಳೆನರಸೀಪುರ ತಾಲ್ಲೂಕಿನ 78
ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸರ್ಕಾರದ ನಿಯಮಾನುಸಾರ ಅಂತ್ಯ ಕ್ರಿಯೆ ನಡೆಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕಿತರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಅಂತರರಾಷ್ಟ್ರೀಯ ಪ್ರಯಾಣ ಇತಿಹಾಸ, ಶೀತ ಜ್ವರ ಮಾದರಿ ಅನಾರೋಗ್ಯ ಹಾಗೂ ಉಸಿರಾಟದ ತೊಂದರೆ ಇರುವವರಿಗೆ ಕೋವಿಡ್‌ ದೃಢಪಟ್ಟಿದೆ. ಕೆಲವರ ಟ್ರಾವೆಲ್‌ ಹಿಸ್ಟರಿ ಪತ್ತೆಯಾಗಿಲ್ಲ ಎಂದರು.

ಹೊಸದಾಗಿ ಆಲೂರು ತಾಲ್ಲೂಕಿನ 1, ಅರಕಲಗೂಡು 21 ಅರಸೀಕೆರೆ 17, ಬೇಲೂರು 16, ಚನ್ನರಾಯಪಟ್ಟಣ 18 , ಹಾಸನ 45 , ಹೊಳೆನರಸೀಪುರ 8 ಹಾಗೂ ಹೊರ ಜಿಲ್ಲೆಯ ಮೂವರಿಗೆ ಸೋಂಕು ತಗುಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು