ಹಳೇಬೀಡು: ಭಗವಾನ್ ಬಾಹುಬಲಿಯ ಸಂದೇಶಗಳು ಜಗತ್ತಿಗೆ ಶಾಂತಿಯನ್ನು ಸಾರುತ್ತಿವೆ ಎಂದು ಬಾಹುಬಲಿ ಪ್ರಭಾವನ ರಥಯಾತ್ರೆಯ ಸಂಯೋಜಕ ಧರಣೇಂದ್ರ ಡಿ.ಜೈನ್ ಶಾಸ್ತ್ರಿ ಹೇಳಿದರು.

ಸಮೀಪದ ಅಡಗೂರು ಗ್ರಾಮಕ್ಕೆ ಸೋಮವಾರ ಬಂದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಭಾವನ ರಥಯಾತ್ರೆಯಲ್ಲಿ ಅವರು ಮಾತನಾಡಿದರು.

ಅಂಹಿಸಾ ತತ್ವಗಳನ್ನು ಅನುಸರಿಸಿ ಪರಸ್ಪರ ಸ್ನೇಹ ಸಹಕಾರದಿಂದ ಬದುಕಿದರೆ ದೇಶ ರಕ್ಷಣೆಗಾಗಿ ಮಾಡುವ ವೆಚ್ಚ ಉಳಿತಾಯವಾಗುತ್ತದೆ. ಇದರಿಂದ ದೇಶದ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಬಾಹುಬಲಿ ಮಹಮಸ್ತಕಾಭೀಷೇಕದ ಪ್ರಚಾರದೊಂದಿಗೆ ಅಹಿಂಸಾತತ್ವಗಳನ್ನು ಜನತೆಗೆ ಪಸರಿಸಲು ರಾಜ್ಯದ ವಿವಿಧೆಡೆ ಪ್ರಭಾವನಾ ರಥಯಾತ್ರೆಯನ್ನು ಶ್ರವಣಬೆಳಗೂಳ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೊರಡಿಸಿದ್ದಾರೆ. ಧರ್ಮ ಜಾಗೃತಿಯೊಂದಿಗೆ ನೈತಿಕ ಉತ್ಪನ್ನ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಉದ್ದೇಶದಿಂದ ರಥ ಸಂಚರಿಸುತ್ತದೆ ಎಂದು ವಿವರಿಸಿದರು.

ಮಂಗಳವಾದ್ಯದೊಂದಿಗೆ ಅಡಗೂರಿನ ಪ್ರಮುಖ ಬೀದಿಗಳಲ್ಲಿ ಪ್ರಭಾವನಾ ರಥದ ಮೆರವಣಿಗೆ ನಡೆಯಿತು. ಮಹಾವೀರ ಜೈನಸಂಘ ಅಧ್ಯಕ್ಷ ನಾಗೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಎ.ಬಿ.ಕಾಂತರಾಜು ಮಾತನಾಡಿದರು.

ಕಾರ್ಯದರ್ಶಿ ಶಶಿಕುಮಾರ್, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪ ರತ್ನರಾಜು, ಕಾರ್ಯದರ್ಶಿ ಸುಧಾ ವಿಜಯ್ಕುಮಾರ್. ಅತುಲ್ ಜೈನ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.