ಹಕ್ಕುಗಳಿಗೆ ಸಂಘಟನಾತ್ಮಕ ಹೋರಾಟ ಅಗತ್ಯ: ಟಿ.ಕೆ. ಬಾಲಕೃಷ್ಣಪ್ಪ ಸಲಹೆ

7
ತುಮಕೂರು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ

ಹಕ್ಕುಗಳಿಗೆ ಸಂಘಟನಾತ್ಮಕ ಹೋರಾಟ ಅಗತ್ಯ: ಟಿ.ಕೆ. ಬಾಲಕೃಷ್ಣಪ್ಪ ಸಲಹೆ

Published:
Updated:
Deccan Herald

ಹಾಸನ: ‘ಸಮುದಾಯದ ಹಕ್ಕುಗಳಿಗಾಗಿ ಸಂಘಟನಾತ್ಮಕ ಹೋರಾಟ ಅಗತ್ಯ’ ಎಂದು ರೇಷ್ಮೆ ಇಲಾಖೆಯ ತುಮಕೂರು ಜಿಲ್ಲೆಯ ಸಹಾಯಕ ನಿರ್ದೇಶಕ ಟಿ.ಕೆ.ಬಾಲಕೃಷ್ಣಪ್ಪ ಸಲಹೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಜಿಲ್ಲಾ ಬಾಬು ಜಗಜೀವನರಾಂ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಿಗ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜದ ಒಂದು ವರ್ಗ ಪರಕೀಯರಂತೆ ನೋಡುತ್ತಿದೆ. ಎಡ ಬಲ ಭೇದ ಮರೆತು ಸಮುದಾಯದ ಏಳಿಗೆಗೆ ಎಲ್ಲರೂ ಒಗ್ಗೂಡಬೇಕಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಕ್ರಾಂತಿಕಾರಿ ಆದರೆ ಸಾಲದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಂ ಅವರ ಬದುಕು, ಹೋರಾಟ, ಆದರ್ಶಗಳನ್ನು ಇಂದಿನ ಮಕ್ಕಳಿಗೆ ತಿಳಿಸಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಅವರು,  ಪ್ರತಿವರ್ಷ ಇಂಥ ಕಾರ್ಯಕ್ರಮ ಆಯೋಜಿಸಿ ಸಮುದಾಯದ ಒಗ್ಗಟ್ಟಿಗೆ ನೆರವಾಗಬೇಕು ಎಂದರು.

ಬಾಲಕಿಯರ ಸರ್ಕಾರಿ ವಿಭಜಿತ ಕಾಲೇಜಿನ ಪ್ರಾಂಶುಪಾಲ ಕೆ.ಪಿ.ಸುರೇಶ್‌ ಅವರು, ಸಮೀಕ್ಷೆ ಪ್ರಕಾರ ಸಮುದಾಯದವರು ಜಿಲ್ಲೆಯಲ್ಲಿ ಹೆಚ್ಚು ಅನಕ್ಷರಸ್ತರಿದ್ದಾರೆ. ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರವೇ ಸಮುದಾಯದ ಏಳಿಗೆ ಸಾಧ್ಯ ಎಂದರು.

ಸಾಮಾಜಿಕ ಹೋರಾಟಗಾರ ಸರಸೀಯಪ್ಪ ಅವರು, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆ ಆರಂಭಿಸಬೇಕಿದೆ. ಜೊತೆಗೆ ಆರ್ಥಿಕ ಸ್ವಾವಲಂಭನೆಗೆ ಎಲ್ಲರೂ ಒಟ್ಟುಗೂಡಿ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಾಬು ಜಗಜೀವನರಾಂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್‌.ಎಸ್‌.ಬಸವರಾಜು, ಮುಖಂಡರಾದ ವೀರಭದ್ರಯ್ಯ, ಶಿವಮ್ಮ ಎನ್‌.ಡಿ.ಸಾಲಿ, ಅಡಗೂರು ರಂಗಪ್ಪ, ಡಾ.ಧನಂಜಯ, ಸಂಘದ ಕಾರ್ಯದರ್ಶಿ ಸೋಮಶೇಕರ್‌, ಸಹ ಕಾರ್ಯದರ್ಶಿ ಕಾಂತರಾಜು, ಸಂಘಟನಾ ಕಾರ್ಯದರ್ಶಿ ಎ.ಆರ್‌.ತೀರ್ಥಪ್ರಸಾದ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !