ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

61 ಗ್ರಾಂ ಚಿನ್ನಾಭರಣ, 90 ಮೊಬೈಲ್ ವಶ

ಅಂತರ ಜಿಲ್ಲಾ ಕಳ್ಳರ ಬಂಧನ: ₹30,300 ನಗದು ವಶ
Last Updated 10 ಮಾರ್ಚ್ 2022, 15:52 IST
ಅಕ್ಷರ ಗಾತ್ರ

ಹಾಸನ: ಮೊಬೈಲ್, ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರುಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಹೊಸಕೋಟೆಯ ಆನಂದ (35) ಮತ್ತು ಬಿಡದಿಯಚಂದ್ರು (35) ಅವರನ್ನು ಬಂಧಿಸಿ, ₹ 18 ಲಕ್ಷ ಬೆಲೆಯ ವಿವಿಧ ಕಂಪನಿಗಳ90 ಮೊಬೈಲ್, 61 ಗ್ರಾಂ ತೂಕದ ಚಿನ್ನಾಭರಣ, ₹ 30,300 ನಗದುವಶ ಪಡಿಸಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.

ಅರಸೀಕೆರೆ ನಗರದಲ್ಲಿ ಇತ್ತೀಚೆಗೆ ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ,ಸಂತೆ ಸ್ಥಳ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ಫೋನ್ ಕಳುವಾಗುತ್ತಿದ್ದವು. ಹಾಗೆಯೇ ದೇವಸ್ಥಾನಗಳಲ್ಲಿ ದೇವರ ಹುಂಡಿಯಲ್ಲಿಹಣ ದೋಚುವುದು, ಮನೆಗಳ್ಳತನ ಪ್ರಕರಣ ವರದಿಯಾಗುತ್ತಿದ್ದವು.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿಮಾರ್ಗದರ್ಶನದಂತೆ ನಗರದಲ್ಲಿ ಕಟ್ಟುನಿಟ್ಟಿನ ರಾತ್ರಿಗಸ್ತು ಕರ್ತವ್ಯನಿರ್ವಹಿಸಲು ಸೂಚಿಸಲಾಗಿತ್ತು. ಅಲ್ಲದೇ ಡಿವೈಎಸ್ಪಿ ಅಶೋಕ್ ಅವರನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಸೋಮೇಗೌಡ, ನಗರ ಪೊಲೀಸ್ ಠಾಣೆಪಿಎಸ್‍ಐ ಭಾರತಿ ರಾಯನಗೌಡರ್ ಅವರನ್ನೊಳಗೊಂಡ ತಂಡ ರಚನೆಮಾಡಲಾಗಿತ್ತು ಎಂದು ವಿವರಿಸಿದರು.

ಮಾರ್ಚ್‌ 6 ರ ಬೆಳಗಿನ ಜಾವ ಅರಸೀಕೆರೆ ರೈಲ್ವೆನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಲೈವ್ ಸ್ಕ್ಯಾನರ್ ಮೂಲಕ ಫಿಂಗರ್ ಸ್ಕ್ಯಾನ್ ಮಾಡಿದಾಗ ಇವರು ಹಿಂದೆಯೂಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಹೆಚ್ಚಿನವಿಚಾರಣೆಗೊಳಪಡಿಸಿದಾಗ ಮೊಬೈಲ್, ಮನೆ ಹಾಗೂ ಹುಂಡಿ ಕಳ್ಳತನಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.

ಆರೋಪಿಗಳು 1 ಮನೆಕನ್ನ ಕಳವು, 2 ದೇವರ ಹುಂಡಿ ಹಣ ಕಳ್ಳತನ ಮತ್ತು 1 ಎಟಿಎಂ ಕೌಂಟರ್ ನಲ್ಲಿ ಹಣ ಕಳ್ಳತನ ಪ್ರಯತ್ನ ಪ್ರಕರಣ ಮತ್ತು ಹಾಸನ ನಗರ ಠಾಣೆಯಲ್ಲಿ ದಾಖಲಾದ 1 ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ ಎಂದರು.

ಮೊಬೈಲ್ ಕಳ್ಳತನದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಶೀಘ್ರ ಹತ್ತಿರದ ಠಾಣೆಗೆ ದೂರುನೀಡಿದರೆ ಕಳ್ಳರನ್ನು ಹಿಡಿಯಲು ಸಹಕಾರಿಯಾಗುತ್ತದೆ. ವಿವಿಧೆಡೆ ಮೊಬೈಲ್‌ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮಾಹಿತಿ ಲಭ್ಯವಾದ ಬಳಿಕ ಮೊಬೈಲ್‌ಗಳನ್ನು ವಾರಸುದಾರರಿಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT