ಹಾಸನ: ಇಲ್ಲಿನ ವಿದ್ಯಾನಗರದಲ್ಲಿರುವ ಕಲಾಶ್ರೀ ಗ್ಯಾಲರಿಯಲ್ಲಿ ಚಿತ್ಕಲಾ ಫೌಂಡೇಶನ್ ಆಶ್ರಯದಲ್ಲಿ ಬಿ.ಎಸ್. ದೇಸಾಯಿ ಅವರ ಮೊಮ್ಮಗಳು, ಶಶಿಕಿರಣ್ ಮತ್ತು ಕಲ್ಪನಾ ಅವರ ಪುತ್ರಿ ಮೂರುವರೆ ವರ್ಷದ ಬಾಲ ಕಲಾವಿದೆ ಡಿಂಪನ ಎಸ್. ದೇಸಾಯಿ ಬಿಡಿಸಿದ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಸಾಹಿತಿ ರೂಪ ಹಾಸನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕಿರು ಪ್ರತಿಭೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದ್ದು, ನಿಜವಾಗಲು ಇದೊಂದು ಆಶ್ಚರ್ಯಕರ ಸಂದರ್ಭ ಎಂದುಕೊಂಡಿದ್ದೇನೆ. ಇಷ್ಟು ಪುಟ್ಟ ಮಗುವಿಗೆ ಚಿತ್ರ ಎಂದರೇನು? ರೇಖೆಗಳೇಂದರೇನು? ಬಣ್ಣಗಳೇಂದರೇನು? ಅದನ್ನು ಯಾವ ರೀತಿ ಬಿಡಿಸಬೇಕು? ಇದರ ಯಾವ ಪರಿಕಲ್ಪನೆ ಹೇಳಿಕೊಟ್ಟರೂ ಬರಲು ಸಾಧ್ಯವಿಲ್ಲ. ಅಂಥ ಸನ್ನಿವೇಶವನ್ನು ನಾವು ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದು ದೇಸಾಯಿ ಹೇಳಿರುವುದು ಖಂಡಿತ ಸತ್ಯ ಎಂದರು.

ಮಗು ಎಂದರೇ ಹುಟ್ಟುವಾಗಲೇ ಒಂದು ವ್ಯಕ್ತಿ ಅಂದುಕೊಂಡಿದ್ದೇನೆ. ಹುಟ್ಟುವಾಗಲೇ ಅನೇಕ ಪ್ರತಿಭೆಗಳು ಸಾಕಷ್ಟು ಕಾಣಬಹುದು. ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ರೀತಿ ನೋಡಿದರೂ ಇಷ್ಟು ಚಿಕ್ಕ ಮಗು, ಇಷ್ಟು ಬೇಗ ಬರವಣಿಗೆ ಪ್ರಾರಂಭಿಸಿದೆ. ದೇಸಾಯಿ ಅವರ ತಾಯಿ ಕೂಡ ಕೌದಿ ಕಲಾವಿದೆ. ನಮ್ಮ ಕಣ್ಣ ಮುಂದೆ ಅವರ ಕಲೆ ಇದೆ ಎಂದರು.

ಪ್ರಸ್ತುತದಲ್ಲಿ ಮಕ್ಕಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರ ಇಡುವುದು ಒಳ್ಳೆಯದು. ಒಂದು ಚಿತ್ರ ಬರೆಯಬೇಕಾದರೇ ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ಈ ಪುಟ್ಟ ಮಗುವಿಗೆ ಇಂತಹ ವಾತಾವರಣ ನಿರ್ಮಾಣ ಮಾಡಿರುವುದು ನಮ್ಮ ಮುಂದೆ ಪ್ರದರ್ಶನವಾಗಿ ಕಂಡು ಬಂದಿದೆ. ಮಕ್ಕಳಲ್ಲಿ ಇಂತಹ ಪ್ರತಿಭೆಗಳು ಹೊರ ಬರಬೇಕು. ಮಗುವಿನೊಳಗೆ ಏನು ಅಡಗಿದೆ ಎಂಬುದನ್ನು ತಿಳಿದು ಅದಕ್ಕೆ ಪೋಷಣೆ ಮಾಡುವ ವಾತಾವರಣವನ್ನು ಪೋಷಕರು ಮಕ್ಕಳಿಗೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕವಾಗಿ ಯೋಚನೆ ಮಾಡುವ ನಿಟ್ಟಿನಲ್ಲಿ ಮಗು ಬೆಳೆಯಲಿ ಎಂದು ಹಾರೈಸಿದರು.

ಚಿತ್ಕಲಾ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, 9 ವರ್ಷದ ಮಕ್ಕಳಿಗೆ ಅನೇಕರು ತರಬೇತಿ ಪಡೆದಿದ್ದಾರೆ. ಆದರೆ ಈ ರೀತಿಯ ಶಿಶುತನದ ಗೀಜುವಿಕೆಯು ಜಗತ್ತಿನೊಳಗೆ ವಿಶಾಲ ಮನೋಭಾವ ಉಳಿಸಿಕೊಳ್ಳಲು ಆಸ್ಪದ ಮಾಡಿಕೊಡುವುದಕ್ಕೆ ಅನೇಕ ಕ್ರಿಯಾಶೀಲ ತಜ್ಞರು ಹೇಳಿದ್ದಾರೆ. ಬಾಲಕಿ ಡಿಂಪನ ಒಂದೂವರೆ ವರ್ಷದಿಂದಲೇ ಬರೆಯುತ್ತ ಬಂದಳು. ಎರಡನೇ ವರ್ಷಕ್ಕೆ ಆ ಮಗು ಬಂದಾಗ ಏನಾದರೂ ಸಾಧನೆ ಆಗಬೇಕು ಎನ್ನುವ ಪ್ರಜ್ಞೆ ಬಂದಿತು. ಕೇವಲ ಭಾಷಣ ಮಾಡುವುದಲ್ಲ, ಮನೆಯಲ್ಲಿರುವ ನಮ್ಮ ಮಗುವಿಗೆ ಅವಕಾಶ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಅವಕಾಶ ನೀಡಿ, ಇಂದು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗೊಂಡಿದೆ ಎಂದರು.

ಶಿಕ್ಷಕಿ ಗಿರಿಜಾ ದಿನಕರ್, ಚಂದ್ರಕಾಂತ್, ಚಂದ್ರಶೇಖರ್, ಬಾಲಕಿ ಡಿಂಪನ ಎಸ್. ದೇಸಾಯಿ. ತಂದೆ ಶಶಿಕಿರಣ್, ತಾಯಿ ಕಲ್ಪನಾ, ಸುರೇಶ್ ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ವಿಶಿಷ್ಟ ಪ್ರತಿಭೆಗಳು ಅರಳುತ್ತಿದೆ. ಸಾಹಿತಿ ಬಾನು ಮುಸ್ತಾಕ್ ಅವರ ಮಟ್ಟಕ್ಕೆ ಬೆಳೆಯುವ ನಿಟ್ಟಿನಲ್ಲಿ ಪುಟ್ಟ ಕಂದ ಡಿಂಪನ ಮುಂದಾಗಿದ್ದಾಳೆ. ಭಯವಿಲ್ಲದೇ ಬಾಲ್ಯದಲ್ಲಿ ಗೀಚುವಿಕೆಯಿಂದ ಹಿಡಿದು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಮಂಜುನಾಥ್ ಲಲಿತ ಕಲಾ ಅಕಾಡೆಮಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.