ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಮನೆ; ಪರಿಹಾರ, ಆಶ್ರಯ ಮನೆ ನೀಡಲು ಮನವಿ

Last Updated 26 ಅಕ್ಟೋಬರ್ 2021, 3:30 IST
ಅಕ್ಷರ ಗಾತ್ರ

ಹಳೇಬೀಡು: ಎಡಬಿಡದೆ ಮಳೆ ಸುರಿದ ಪರಿಣಾಮ ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಿಂಭಾಗ, ಪಶು ಆಸ್ಪತ್ರೆ ಪಕ್ಕದ ಮನೆ ಭಾನುವಾರ ರಾತ್ರಿ ಭಾಗಶಃ ಬಿದ್ದಿದೆ. ಉಳಿದ ಭಾಗದ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದ ಚಾವಣಿಗೆ ಹಾನಿಯಾಗಿದೆ.

ಸಣ್ಣ ಪ್ರಮಾಣದ ಬಟ್ಟೆ ವ್ಯಾಪಾರ ನಡೆಸುತ್ತಿರುವ ಮೋಹನ್ ರಾವ್ ಅವರೇ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದಾರೆ.

‘ಮನೆಯಲ್ಲಿದ್ದ ಪಾತ್ರೆಗಳು ಹಾಗೂ ಗ್ಯಾಸ್ ಸ್ಟೌ ಗೋಡೆಯ ಮಣ್ಣಿನಡಿ ಸಿಲುಕಿ ನಜ್ಜುಗುಜ್ಜಾಗಿವೆ. ಯಾವುದೇ ಸಂದರ್ಭದಲ್ಲಾದರೂ ಗೋಡೆ, ಚಾವಣಿ ಬೀಳುವ ಸ್ಥಿತಿಯಲ್ಲಿದೆ. ಕಾಲೇಜು ವ್ಯಾಸಂಗ ಮಾಡುತ್ತಿರುವ ಮಕ್ಕಳು ಕುಳಿತು ಓದುವುದಕ್ಕೂ ಸ್ಥಳ ಇಲ್ಲವಾಗಿದೆ. ಕಷ್ಟಪಟ್ಟು ದುಡಿದರೂ ಕುಳಿತು ಊಟ ಮಾಡುವುದಕ್ಕೂ ಸ್ಥಳಾವಕಾಶವೇ ಇಲ್ಲ’ ಎಂದು ಮೋಹನ್ ರಾವ್ ಅಳಲು ತೋಡಿಕೊಂಡರು.

ಸರ್ಕಾರ ಪರಿಹಾರ ಕೊಡುವುದರೊಂದಿಗೆ ಗ್ರಾಮ ಪಂಚಾಯಿತಿಯಿಂದ ಆಶ್ರಯ ಯೋಜನೆಯ ಧನಸಹಾಯ ದೊರಕಿದರೆ, ಸೂರು ಮಾಡಿಕೊಂಡು ಬದುಕಬಹುದು ಎಂದು ಕಳೆದುಕೊಂಡ ಕುಟುಂಬದವರು ವಿನಂತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT