ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ಕಾಡಾನೆ ದಾಳಿಯಿಂದ ಪಾರಾದ ರೈತ

ಬ್ಯಾದನೆ ಗ್ರಾಮದಲ್ಲಿ ಒಂಟಿ ಸಲಗ ದಾಳಿ; ಕೃಷಿ ವಸ್ತುಗಳು ನಾಶ
Last Updated 21 ಮಾರ್ಚ್ 2022, 3:56 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದ ಕೃಷ್ಣೇಗೌಡ ಎಂಬುವರು ಭಾನುವಾರ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.

ಕೃಷ್ಣೇಗೌಡ ಬೆಳಿಗ್ಗೆ ಕಾಫಿ ತೋಟಕ್ಕೆ ನೀರು ಹಾಯಿಸಲು ಪೈಪ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಕಿರು ಸೇತುವೆಯ ಪೈಪ್‌ನೊಳಗೆ ನುಗ್ಗಿದ್ದಾರೆ. ಪೈಪ್‌ನೊಳಗೂ ಆನೆ ಸೊಂಡಿಲು ಹಾಕಿದೆ. ಇದನ್ನು ಗಮನಿಸಿದ ಕೃಷ್ಣೇಗೌಡ ಮತ್ತೊಂದು ಬದಿಗೆ ಹೋಗಿದ್ದಾರೆ. ಆನೆ ಕೆಲ ಸಮಯ ಮೋರಿ ಸಮೀಪವೇ ಅತ್ತಿಂದಿತ್ತ ಓಡಾಡಿ, ಪೈಪ್‌ಗಳನ್ನು ತುಳಿದು, ಪಂಪ್‌ಸೆಟ್‌ ಹಾಳು ಮಾಡಿ ತೆರಳಿದೆ.

ಅಣ್ಣಮಲೈ ಎಸ್ಟೇಟ್ ಮಾಲೀಕರಾದ ರಾಜಮಣಿ ಮಾತನಾಡಿ, ‘ಆನೆಗಳ ಕಾಟ ಹೆಚ್ಚಾಗಿದ್ದು, ಆತಂಕಗೊಂಡಿದ್ದೇವೆ. ತೋಟದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಬ್ಯಾದನೆ ವಿಜಯ್ ಕುಮಾರ್, ಪೃಥ್ವಿ, ಪ್ರಶಾಂತ್, ಬಾಬು, ನಾರ್ವೆಪೇಟೆ ಗ್ರಾ.ಪಂ ಉಪಾಧ್ಯಕ್ಷ ನಾರ್ವೆ ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT