ಸೋಮವಾರ, ಸೆಪ್ಟೆಂಬರ್ 27, 2021
21 °C
ಬೀಗ ಮುರಿದು ಕಳ್ಳತನ ನಾಟಕ ಬಯಲು

ಮಗಳ ಆಭರಣ ಕದ್ದು ಸಿಕ್ಕಿಬಿದ್ದ ತಂದೆ, ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಮಗಳ ಹಣ ಹಾಗೂ ಒಡವೆ ಲಪಟಾಯಿಸಿ ಕಳ್ಳತನದ ಕಥೆ ಕಟ್ಟಿದ್ದ ತಂದೆ, ತಾಯಿ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

ಪಟ್ಟಣದ ಗುರಪ್ಪಗೌಡರ ಬೀದಿ ನಿವಾಸಿ ಕಲ್ಲೇಶಾಚಾರ್ ಮತ್ತು ಅವರ ಪತ್ನಿ ಮಮತಾ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಬುಧವಾರ ಮನೆಗೆ ಬೀಗ ಹಾಕಿಕೊಂಡು ಅಂಗಡಿ ಹೋಗಿದ್ದಾಗ ಕಳ್ಳರು ಮನೆ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ, ಸೂಟ್‌ಕೇಸ್‌ನಲ್ಲಿದ್ದ ಮಗಳ ₹ 54,500 ನಗದು ಹಾಗೂ ₹ 2.34 ಲಕ್ಷ ಮೌಲ್ಯದ ಆಭರಣ ದೋಚಿಕೊಂಡು ಹೋಗಿದ್ದಾರೆ’ ಎಂದು ಮಮತಾ ಅವರು ನಗರದಲ್ಲೇ ಇದ್ದ ತನ್ನ ಮಗಳು ರೇಖಾ ಮತ್ತು ಅಳಿಯ ನಟರಾಜುಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ನಂತರ ರೇಖಾ ಪೊಲೀಸರಿಗೆ ದೂರು ನೀಡಿದ್ದರು.

ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಯೋಗೇಶ್, ಪಿಎಸ್‌ಐ ಶಿವನಗೌಡ ಜಿ. ಪಾಟೀಲ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ, ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

ರೇಖಾ ಅವರ ತಾಯಿ ಮಮತಾ, ತಂದೆ ಕಲ್ಲೇಶಾಚಾರ್ ಅವರೇ ಚಿನ್ನಾಭರಣ ಹಾಗೂ ಹಣ ಕದ್ದು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.