ಸೋಮವಾರ, ಡಿಸೆಂಬರ್ 16, 2019
18 °C

ಎಸಿಬಿ ಬಲೆಗೆ ಹಿಮ್ಸ್‌ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ರೋಗಿಗೆ ಚಿಕಿತ್ಸೆ ನೀಡಲು ಐದು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ರಾಜಶೇಖರ್‌ ಸಿಕ್ಕಿ ಅವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿಯ ಚಂದ್ರಕಲಾ ಎಂಬುವರ ಗರ್ಭ ಸುರಕ್ಷತಾ ಕವಚ ತೆಗೆಯಲು ಐದು ಸಾವಿರ ಲಂಚ ನೀಡುವಂತೆ ಕೇಳಿದ್ದರು. ಅದರಂತೆ ರೋಗಿ ಸಂಬಂಧಿಕರಿಂದ ಆಸ್ಪತ್ರೆ ಆವರಣದಲ್ಲಿ ಲಂಚ ಪಡೆಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು.

ವೈದ್ಯರನ್ನ ವಶಕ್ಕೆ ಪಡೆದು ಎರಡು ತಾಸು ಅಧಿಕಾರಿಗಳು ವಿಚಾರಣೆ ನಡೆಸಿದರು.

 

 

ಪ್ರತಿಕ್ರಿಯಿಸಿ (+)