ಗುರುವಾರ , ಏಪ್ರಿಲ್ 15, 2021
26 °C

ಕೆರೆಯಲ್ಲಿ ಎತ್ತಿನ ಗಾಡಿ ಮುಳುಗಿ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ (ಹಾಸನ ಜಿಲ್ಲೆ): ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಶನಿವಾರ ಬೆಳಿಗ್ಗೆ ಎತ್ತಿನಗಾಡಿ ಮುಳುಗಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಗ್ರಾಮದ ರೈತ ರಾಜೇಗೌಡ (65), ಅವರ ಪತ್ನಿ ಶಾರದಮ್ಮ (55), ರುಚಿತಾ (7) ಹಾಗೂ ದ್ವಿತಿತಾ (4)ಮೃತಪಟ್ಟವರು.

ಮಕ್ಕಳಿಬ್ಬರೂ ರಾಜೇಗೌಡರ ಅಣ್ಣನ ಮೊಮ್ಮಕ್ಕಳಾಗಿದ್ದು, ಬೇಸಿಗೆ ರಜೆ ಕಳೆಯಲೆಂದು ಮೈಸೂರಿನಿಂದ ಬಂದಿದ್ದರು.

ಘಟನೆ ವಿವರ: ರಾಜೇಗೌಡ ಹಾಗೂ ಅವರ ಪತ್ನಿ, ಜೋಳ ಬಿತ್ತನೆಗಾಗಿ ಎತ್ತಿನಗಾಡಿ ಕಟ್ಟಿಕೊಂಡು ಹೊಲಕ್ಕೆ ಹೊರಡಲು ಬೆಳಿಗ್ಗೆ ಸಿದ್ಧರಾಗಿದ್ದರು. ತಮ್ಮೊಂದಿಗೆ ಬರಲು ಇಚ್ಛಿಸಿದ ಈ ಮಕ್ಕಳನ್ನೂ ಕರೆದುಕೊಂಡು ಹೊರಟಿದ್ದರು. ಹೊಲಕ್ಕೆ ಹೋಗಲು ಕೆರೆಯ ಏರಿಯ ಮೇಲೆ ಜಾಗ ಇದ್ದರೂ, ದಾರಿ ಸಮೀಪವಾಗುತ್ತದೆ ಎಂದು ಎಂದಿನಂತೆ ಕೆರೆಯ ಬಯಲಿನಲ್ಲಿ ಗಾಡಿ ಹೊಡೆದುಕೊಂಡು ಹೋಗಿದ್ದಾರೆ. ಈಚೆಗೆ ಬಿದ್ದ ಮಳೆಯಿಂದಾಗಿ, ಹೂಳೆತ್ತಿದ ಗುಂಡಿಗಳು ಕಂಡಿಲ್ಲ. ಗುಂಡಿಯೊಂದರಲ್ಲಿ ಎತ್ತಿನ ಗಾಡಿ ಮಗುಚಿ, ಎಲ್ಲರೂ ಕೆಸರು ನೀರಿನಲ್ಲಿ ಮುಳುಗಿದ್ದಾರೆ. ಎತ್ತುಗಳು ದಡ ಸೇರಿವೆ.

ಗ್ರಾಮಸ್ಥರ ಸಹಾಯದಿಂದ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು