ಶುಕ್ರವಾರ, ನವೆಂಬರ್ 22, 2019
20 °C

ಅಪಘಾತ: ಗಂಡು ಚಿರತೆ ಸಾವು

Published:
Updated:
Prajavani

ಚನ್ನರಾಯಪಟ್ಟಣ: ತಾಲ್ಲೂಕಿನ ಗೌಡಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಎರಡೂವರೆ ವರ್ಷದ ಗಂಡು ಚಿರತೆ ಶನಿವಾರ ರಾತ್ರಿ ಸತ್ತಿದೆ.

ತಲೆಗೆ ಏಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಟ್ಟಣದ ಹೊರವಲಯದಲ್ಲಿರುವ ಬೆಲಸಿಂದ ವನದಲ್ಲಿ ಭಾನುವಾರ ಹೂಳಲಾಯಿತು.

ಡಿಕ್ಕಿ ಹೊಡೆದ ವಾಹನದ  ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಅರಣ್ಯಾಧಿಕಾರಿ ಹೇಮಂತ್ ತಿಳಿಸಿದರು.

ಪ್ರತಿಕ್ರಿಯಿಸಿ (+)