ಶುಕ್ರವಾರ, ನವೆಂಬರ್ 22, 2019
26 °C

ಒಕ್ಕಣೆ ಟ್ರಾಕ್ಟರ್‌ ಉರುಳಿ ಇಬ್ಬರ ಸಾವು

Published:
Updated:
Prajavani

ಬೇಲೂರು: ಪಟ್ಟಣಕ್ಕೆ ಸಮೀಪದ ಸನ್ಯಾಸಿಹಳ್ಳಿ ಮಲ್ಲಾಪುರ ಗ್ರಾಮದಲ್ಲಿ ಮುಸುಕಿನ ಜೋಳವನ್ನು ಬಿಡಿಸುವ (ಒಕ್ಕಣೆ) ಟ್ರಾಕ್ಟರ್ ಶನಿವಾರ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಪುಟ್ಟಸ್ವಾಮಿ (58) ಮತ್ತು ರಾಮೇಗೌಡ (60) ಮೃತಪಟ್ಟವರು. ಮಲ್ಲಾಪುರ ಗ್ರಾಮದಲ್ಲಿ ಮುಸುಕಿನ ಜೋಳವನ್ನು ಒಕ್ಕಣೆ ಮಾಡಿ ಹಿಂತಿರುಗುವ ಸಂದರ್ಭದಲ್ಲಿ ಟ್ರಾಕ್ಟರ್‌ನ ಚಕ್ರ ಮರದ ತುಂಡಿನ ಮೇಲೆ ಹತ್ತಿದ್ದರಿಂದ ಉರುಳಿದೆ. ಮೇಲೆ ಕುಳಿತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ  ಒಕ್ಕಣೆ ಯಂತ್ರ ಬಿದ್ದ ಕಾರಣ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸುರೇಶ, ರಾಜಯ್ಯ ಮತ್ತು ಮಂಜಯ್ಯ ಅವರು ಗಾಯಗೊಂಡಿದ್ದು. ಚಾಲಕ ಜಗದೀಶ್‌ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಅಜಯ್‌ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)