ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೀಸಾವೆ: ಆರೋಪಿಯ ಕಾಲಿಗೆಗುಂಡು: ಬಂಧನ

Published 11 ಆಗಸ್ಟ್ 2024, 13:35 IST
Last Updated 11 ಆಗಸ್ಟ್ 2024, 13:35 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿ ಬೂಕನಬೆಟ್ಟದ ಬಳಿ ಭಾನುವಾರ ಬೆಳಿಗ್ಗೆ ಪೊಲೀಸರು ಆತ್ಮರಕ್ಷಣೆಗಾಗಿ ದರೋಡೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡಿನ ದಾಳಿ ನಡೆಸಿದ್ದಾರೆ.

ಹಿರೀಸಾವೆಯಲ್ಲಿ ನಾಲ್ಕು ವರ್ಷಗಳಿಂದ ವಾಸವಾಗಿರುವ ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದ ಸತೀಶ್‌ ಗುಂಡೇಟು ತಗುಲಿದ ಆರೋಪಿ. ನುಗ್ಗೇಹಳ್ಳಿ ಠಾಣೆ ಮತ್ತು ಚನ್ನರಾಯಪಟ್ಟಣ  ನಗರ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳು ನಡೆದ ಎರಡು ದರೋಡೆ ಪ್ರಕರಣಗಳ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಪೊಲೀಸರು  ಬಂಧಿಸಲು ಹೋದಾಗ ಸತೀಶ್‌ ಅವರ ಮೇಲೆ ಡ್ರ್ಯಾಗರ್‌ನಿಂದ ದಾಳಿ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪಿಎಸ್ಐ ಭರತ್ ಕುಮಾರ್ ರೆಡ್ಡಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಹಿರೀಸಾವೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಗಿದೆ. ಚನ್ನರಾಯಪಟ್ಟಣ ನಗರ ಠಾಣೆಯ ಸಿಬ್ಬಂದಿ ಪುಟ್ಟರಾಜ ಎಂಬುವವರ ಬಲಗೈಗೆ ಗಾಯವಾಗಿದ್ದು, ಹಿರೀಸಾವೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಹಿರೀಸಾವೆ ಸಿಪಿಐ ಸಂತೋಷ ‘ಪ್ರಜಾವಾಣಿ’ಗೆ ತಿಳಿಸಿದರು.

ಚನ್ನರಾಯಪಟ್ಟಣ ನಗರ ಇನ್‌ಸ್ಪೆಕ್ಟರ್‌ ರಘುಪತಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ದರೋಡೆ ಆರೋಪಿ ಜೊತೆ ಇದ್ದ ಮೂರು ಮಂದಿ ತಪ್ಪಿಸಿಕೊಂಡಿದ್ದಾರೆ. ಕಳೆದ ವಾರ ನಾಲ್ವರನ್ನು  ಬಂಧಿಸಲಾಗಿತ್ತು. ಅಪರಾದ ವಿಭಾಗದ ಎಎಸ್‌ಪಿ ವೆಂಕಟೇಶ್ ನಾಯ್ಡು, ಡಿವೈಎಸ್‌ಪಿ ರವಿಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಗಾಯಗೊಂಡಿರುವ ಪೊಲೀಸ್ ಪುಟ್ಟರಾಜು ಆರೋಗ್ಯ  ವಿಚಾರಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT