ಅರಸೀಕೆರೆ: ‘ದಿನಪೂರ್ತಿ ರೈತರಿಗೆ ವಿದ್ಯುತ್ ನೀಡಲು 350 ಎಕರೆ ಸರ್ಕಾರಿ ಜಮೀನಿನಲ್ಲಿ ವಿದ್ಯುತ್ ಉತ್ಪತೀ ಮಾಡಲು ಯೋಜನೆಗೆ ಚಾಲನೆ ದೊರೆಯಲಿದೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಣ್ಣ ನೀರಾವರಿ ಇಲಾಖೆಯಿಂದ 35 ಫಲಾನುಭವಿಗಳಿಗೆ ಪಂಪ್ ಮತ್ತು ಮೋಟಾರ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತರ ಆರ್ಥಿಕ ಸುಧಾರಣೆ ಹಾಗೂ ರೈತರು ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಎತ್ತಿನ ಹೊಳೆ ಯೋಜನೆ ಮೂಲಕ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸುವುದು ಹಾಗೂ ಅಗತ್ಯ ವಿದ್ಯುತ್ ತಾಲ್ಲೂಕಿನಲ್ಲೇ ಉತ್ಪತ್ತಿ ಮಾಡಲಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಭಾಗದ ಅಭಿವೃದ್ದಿಯಾಗದ ಹೊರತು ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಮನಗೊಂಡು ಶಾಸಕನಾದ ಮೇಲೆ 3 ರಿಂದ 4 ಸಾವಿರ ಬೋರೆವೆಲ್ ಕೊರೆಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಸಾವಿರಾರು ಕುಟುಂಬಗಳ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು ಗಂಗಾ ಕಲ್ಯಾಣ ಯೋಜನೆ ನಿರುದ್ಯೋಗ ನಿವಾರಿಸುವಲ್ಲಿ ಪ್ರಮುಖ ಅಸ್ತ್ರವಾಗಿದೆ’ ಎಂದರು.

‘ಕ್ಷೇತ್ರದಲ್ಲಿ ಸಾವಿರಾರು ಚೆಕ್ಡ್ಯಾಮ್ ನಿರ್ಮಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು ಎಲ್ಲಾ ಬೋರೆವೆಲ್ಗಳಲ್ಲಿ ಸಮಗ್ರ ನೀರು ದೊರೆಯುತ್ತಿದ್ದು ಬೋರೆವೆಲ್ಗಳ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಣಕಟ್ಟೆ ಹೋಬಳಿಯ 8 ಕೆರೆಗಳಿಗೆ ನೀರು ಹರಿಸಲಾಗಿದ್ದು ಬಾಗಿನ ಅರ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಿ ರೈತರು ಸದಾ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು’ ಎಂದರು.

‘ರೈತರ ಅರ್ಥಿಕ ಜೀವನಮಟ್ಟ ಸುಧಾರಿಸಲು ಈ ವರ್ಷವು ಗಂಗಾ ಕಲ್ಯಾಣ ಯೋಜನೆಯ ಮೂಲಕ ಬೋರೆವೆಲ್ ಕೊರೆಸಿ ಮತ್ತಷ್ಟು ಫಲಾನುಭವಿಗಳಿಗೆ ಪಂಪ್ ಮೋಟಾರ್ ವಿತರಿಸಲಾಗುವುದು. ಕ್ಷೇತ್ರದ ರೈತರನ್ನು ಸಂಕಷ್ಟದಿಂದ ದೂರ ಮಾಡಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು’ ಎಂದು ಹೇಳಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಂದರ್ ರಾಜ್, ಕಿರಿಯ ಎಂಜಿನಿಯರ್ ಉಮೇಶ್, ಸಹಾಯಕ ಎಂಜಿನಿಯರ್ ಗಂಗಾಧರ್, ಸಿಬ್ಬಂದಿ ವರ್ಗದವರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.