ಅಡ್ವಾಣಿ ಅವರನ್ನು ರಾಷ್ಟ್ರಪತಿ ಮಾಡಲು ಆಗುತ್ತಿರಲಿಲ್ಲವೇ?: ಎಚ್‌.ಡಿ.ದೇವೇಗೌಡ

ಬುಧವಾರ, ಏಪ್ರಿಲ್ 24, 2019
29 °C
ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್‌ ವರಿಷ್ಠ ವಾಗ್ದಾಳಿ

ಅಡ್ವಾಣಿ ಅವರನ್ನು ರಾಷ್ಟ್ರಪತಿ ಮಾಡಲು ಆಗುತ್ತಿರಲಿಲ್ಲವೇ?: ಎಚ್‌.ಡಿ.ದೇವೇಗೌಡ

Published:
Updated:

ಹಾಸನ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಇಲ್ಲದಿದ್ದರೆ ನರೇಂದ್ರ ಮೋದಿ ಮುಗಿದು ಹೋಗುತ್ತಿದ್ದರು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಸಕಲೇಶಪುರ ತಾಲ್ಲೂಕು ವನಗೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ನಡೆಸಿದ ಅವರು, ‘ಹಿರಿಯ ಮುತ್ಸದ್ದಿ ಅಡ್ವಾಣಿ ಈಗ ಏನಾಗಿದ್ದಾರೆ. ಅವರನ್ನ ರಾಷ್ಟಪತಿ ಮಾಡಲು ಆಗ್ತಿರಲಿಲ್ಲವೇ? ಒಬ್ಬ ವ್ಯಕ್ತಿ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ. ಮಾನಸಿಕ ವೇದನೆ ನೀಡುವ ಮೂಲಕ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ. ಅವರಿಂದಲೇ ಬೆಳೆದ ವ್ಯಕ್ತಿ ಹಿರಿಯರಿಗೆ ನೀಡುತ್ತಿರುವ ಗೌರವ ಅವರ ಸಂಸ್ಕೃತಿಯನ್ನು ತೋರುತ್ತದೆ’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ, ಆದರೆ ಮಹಾ ಘಟಬಂಧನ್‌ ಮುನ್ನಡೆಸಲು ಲೋಕಸಭೆಯಲ್ಲಿ ಇರಲೇಬೇಕು ಎಂಬ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎರಡೇ ದಿನ ಪ್ರಚಾರ ನಡೆಸುತ್ತೇನೆ. ಸಂಪೂರ್ಣ ಜವಾಬ್ದಾರಿಯನ್ನು ಪರಮೇಶ್ವರ್‌ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 1

  Sad
 • 1

  Frustrated
 • 14

  Angry

Comments:

0 comments

Write the first review for this !