ಆಲೂರು: ಅಗ್ನಿ ಅನಾಹುತಗಳಾದ ಸಂದರ್ಭದಲ್ಲಿ ಗಾಬರಿಗೊಳ್ಳದೆ, ಕೂಡಲೆ ಹೆಸರು, ದೂರವಾಣಿ ಸಂಖ್ಯೆ, ಯಾವ ತರಹದ ಬೆಂಕಿ, ಊರು, ರಸ್ತೆ ಎಂಬುದರ ಸರಿಯಾದ ವಿಳಾಸವನ್ನು ತಿಳಿಸಿದರೆ, ಅಗ್ನಿಶಾಮಕ ದಳ ಕೂಡಲೆ ಘಟನಾ ಸ್ಥಳಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಆಲೂರು ಅಗ್ನಿಶಾಮಕ ಠಾಣಾಧಿಕಾರಿ ಡಿ.ಜಿ. ಮಂಜೇಗೌಡ ತಿಳಿಸಿದರು.

ಪಟ್ಟಣದ ಮಿನಿ ವಿದಾನಸೌಧ ಆವರಣದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ, ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮಾತನಾಡಿದರು.

ಬೇಸಿಗೆ ಕಾಲದಲ್ಲಿ ಮನೆಗಳು, ಹುಲ್ಲು ಮೆದೆಗಳು, ಮರದ ರಾಶಿಗೆ ಬೆಂಕಿ ತಗುಲಿದಾಗ ಸಾಕಷ್ಟು ಮರಳು ಹಾಗೂ ನೀರನ್ನು ಹಾಕಬೇಕು. ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇತರೆ ಇಂಧನಗಳಿಗೆ ಬೆಂಕಿ ತಗುಲಿದಾಗ ನೀರನ್ನು ಹಾಕಬಾರದು. ನೀರು ಭಾರವಾಗಿರುವುದರಿಂದ ಕೆಳಗಿಳಿದು ಬೆಂಕಿಯ ರಭಸ ಹೆಚ್ಚಾಗುತ್ತದೆ. ಅಲ್ಲದೆ ಬೇರೆಡೆಗೆ ವ್ಯಾಪಿಸುವ ಸಾಧ್ಯತೆಗಳು ಇರುತ್ತದೆ. ಇಂತಹ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಹೆಚ್ಚಿನ ಮರಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ವಿದ್ಯುತ್ ಒಲೆಗಳಲ್ಲಿ ಕೆಲಸ ಮಾಡುವಾಗ ಮರದ ಹಲಗೆ ಅಥವಾ ರಬ್ಬರ್ ಶೀಟ್ ಮೇಲೆ ನಿಂತು ಕೆಲಸ ಮಾಡಬೇಕು. ಯಾವುದೇ ವಿದ್ಯುತ್ ಉಪಕರಣಕ್ಕೆ ಬೆಂಕಿ ತಗುಲಿದಾಗ ನೀರನ್ನು ಹಾಕದೆ ತಕ್ಷಣ ಮೇನ್ ಸ್ವಿಚ್ಡ್ ಆಫ್ ಮಾಡಿ ಮರಳನ್ನು ಹಾಕಬೇಕು. ಒಲೆಯ ಮೇಲಿಟ್ಟಿರುವ ಪಾತ್ರೆಗಳನ್ನು ಹೊರ ತೆಗೆಯಲು ಸೀರೆ, ಉಟ್ಟ ಬಟ್ಟೆಯ ಭಾಗವನ್ನು ಉಪಯೋಗಿಸಬಾರದು. ಯಾವುದೇ ಕಾರಣಕ್ಕೂ ಪೆಟ್ರೋಲ್, ಡೀಸೆಲ್ ಇತರೆ ಅಪಾಯಕಾರಿ ವಸ್ತುಗಳನ್ನು ಮನೆಯಲ್ಲಿ ಶೇಖರಿಸಬಾರದು. ಉಟ್ಟ ಬಟ್ಟೆಗೆ ಅಥವಾ ದೇಹಕ್ಕೆ ಬೆಂಕಿ ತಗುಲಿದಾಗ ಕೂಡಲೆ ಕಂಬಳಿ ಅಥವಾ ದಪ್ಪನೆಯ ಹೊದಿಕೆಯ ಬಟ್ಟೆಯನ್ನು ಸುತ್ತಿ ನೆಲದ ಮೇಲೆ ಎರಡು ಮೂರು ಬಾರಿ ಹೊರಳಾಡಿಸಬೇಕು, ಬೆಂಕಿಯಿಂದ ದೇಹಕ್ಕೆ ಗಾಯಗಳಾದಾಗ ಶುದ್ಧ ನೀರನ್ನು ಹಾಕಬೇಕು ಎಂದರು.

ಪ್ರಮುಖ ಅಗ್ನಿಶಾಮಕ ಯೋಗೀಶ್ ಮಾತನಾಡಿ, ಅಂಗಡಿ ಮಳಿಗೆಯಿಂದ ರಾತ್ರಿ ಬೀಗ ಹಾಕಿ ಹೋಗುವಾಗ ಎಲೆಕ್ಟ್ರಿಕ್ ಮೇನ್ ಸ್ವಿಚ್ಡ್ ಆಫ್ ಮಾಡಬೇಕು. ದೇವರ ಫೋಟೊಗಳ ಮುಂದೆ ದೀಪ, ಗಂಧದ ಕಡ್ಡಿಗಳನ್ನು ಹಚ್ಚಿದ್ದಲ್ಲಿ ನಂದಿಸಿ ಹೋಗುವುದನ್ನು ಮರೆಯಬಾರದು. ಗ್ಯಾಸ್ ಸ್ಟೌಗಳನ್ನು ಯಾವಾಗಲೂ ಸಿಲಿಂಡರ್ಗಿಂತ ಎತ್ತರದ ಪ್ರದೇಶಗಳಲ್ಲಿ ಇಟ್ಟು ಅಡುಗೆ ಮಾಡುವುದು ಉತ್ತಮ. ಎಲ್ಪಿಜಿ ಉಳಿಕೆ ಅನಿಲ ಪಡೆಯುವುದಕ್ಕಾಗಿ ಸಿಲಿಂಡರನ್ನು ತಲೆಕೆಳಗಾಗಿ ಮಾಡಬೇಡಿ ಅಥವಾ ಬಿಸಿ ನೀರಿನ ಪಾತ್ರೆಗಳಲ್ಲಿ ಇಡಬಾರದು. ಪ್ರತಿ ಉಪಯೋಗದ ನಂತರ ಬರ್ನಲ್ ಹಾಗೂ ರೆಗ್ಯುಲೇಟರ್ಗಳ ವಾಲ್ಅನ್ನು ಆಫ್ ಮಾಡಬೇಕು. ಅನಿಲ ಸೋರಿಕೆ ಪತ್ತೆಹಚ್ಚಲು ಸೋಪು ನೀರನ್ನು ಮಾತ್ರ ಬಳಸಬೇಕು. ಬದಲಾಗಿ ಹಚ್ಚಿದ ದೀಪ, ಮೇಣದಬತ್ತಿ, ಬೆಂಕಿಪಟ್ಟಣ ಉಪಯೋಗಿಸಬಾರದು. ಅನಿಲ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡರೆ ತಕ್ಷಣ ಒದ್ದೆಗೋಣಿ ಚೀಲದಿಂದ ಬೆಂಕಿ ಆರಿಸಬೇಕು. ಎಲ್ಪಿಜಿ ಸ್ಟೌ ಬಳಕೆ ಮಾಡುವವರು ರಬ್ಬರ್ ಟ್ಯೂಬನ್ನು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು ಎಂದರು.

ತುರ್ತು ಸೇವೆಗೆ ದೂರವಾಣಿ 08170-200047, 112, 101 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಕು ಎಂದರು.

ಚಾಲಕ ಪ್ರೀತಮ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-36-2036945897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.