ಆಲೂರು: ಪಟ್ಟಣದ ಕೋಣನಕಟ್ಟೆ ಕೆರೆ ದುರಸ್ತಿ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಗುರುವಾರ ಮಧ್ಯಾಹ್ನ ಕೋಣನಕಟ್ಟೆ ಕೆರೆ ವೀಕ್ಷಿಸಿ ಮಾತನಾಡಿದ ಅವರು, ‘ಕೆರೆ ಸುಮಾರು ಒಂದುಕಾಲು ಎಕರೆ ಪ್ರದೇಶವನ್ನೊಳಗೊಂಡಿದೆ. ಈ ಪ್ರದೇಶದಲ್ಲಿ ಇದೊಂದೆ ಕೆರೆ ಇದೆ. ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿದೆ. ಗಿಡ ಗುಂಟೆಗಳು ಬೆಳೆದು ನಿಂತಿರುವುದರಿಂದ ಕಸ ಶೇಖರಣೆಯಾಗುತ್ತಿದೆ. ಮೊದಲು ಸರ್ವೆ ಮಾಡಿ ಕೆರೆಯಂಗಳವನ್ನು ಗುರುತಿಸಲಾಗುವುದು. ನಂತರ ಹೂಳು ತೆಗೆದು ಏರಿ ಪ್ರದೇಶಕ್ಕೆ ಕಲ್ಲಿನಿಂದ ರಿವಿಟ್ಮೆಂಟ್ ಮಾಡಿ ಸುಂದರಗೊಳಿಸಲಾಗುವುದು. ಕೆರೆ ಅಭಿವೃದ್ಧಿ ಪಡಿಸಿದರೆ ಪಟ್ಟಣ ಸುಂದರವಾಗುವುದಲ್ಲದೆ ಸದಾ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ. ಮುಂದಿನ ಎರಡು ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು. ಕಿರು ನೀರಾವರಿ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-1278987187

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.