ಆಲೂರು: 800 ವರ್ಷಗಳ ಇತಿಹಾಸವುಳ್ಳ ಕಸಬಾ ಮರಸು ಗ್ರಾಮದ ತಿರುಮಲ ರಂಗನಾಥಸ್ವಾಮಿ ಮತ್ತು ಗ್ರಾಮ ದೇವತೆ ಉಡುಸಲಮ್ಮ ದೇವಿ ಜಾತ್ರೆ ಮಾರ್ಚ್13ಆರಂಭವಾಗಿದ್ದು, 15ರಂದು ನಡೆಯಲಿದೆ.

13 ರಂದು ರಾತ್ರಿ 2 ಗಂಟೆಗೆ ತಿರುಮಲ ರಂಗನಾಥಸ್ವಾಮಿ, ಉಡುಸಲಮ್ಮ ಅಡ್ಡೆ ದೇವರು, ಗಂಗಾಸ್ಥಾನಕ್ಕೆ ತಲುಪಿಸಿದರು. ಗಂಗಾಸ್ಥಾನದಿಂದ ನಡೆಮುಡಿಯಲ್ಲಿ ಉಡುಸಲಮ್ಮ ದೇವಿ ಕಳಸವನ್ನು, ಮಡಿವಾಳ ವಂಶಸ್ಥರಾದ ವೀರೇಶ್ ತಲೆ ಮೇಲೆ ಹೊರಿಸಿ, ಮೂಲ ದೇವಸ್ಥಾನದವರೆಗೆ, ಹೊಗಳುಪದ, ಮಣ ಹಾಕುವುದರೊಂದಿಗೆ ವಾದ್ಯಗೋಷ್ಠಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.

14 ರಂದು ಬೆಳಿಗ್ಗೆ 6 ಗಂಟೆಗೆ ಕೆಂಡೋತ್ಸವ ನಡೆಯಲಿದೆ. ಭಕ್ತರು ಕೆಂಡ ಹಾಯ್ದು ಪುನೀತರಾಗುತ್ತಾರೆ. ನಂತರ ಉಡುಸಲಮ್ಮ ದೇವಿ ಮೆರೆ ದೇವರ ಎದುರು, 101 ಎಡೆಯನ್ನು ಸುತ್ತಲಿನ ಗ್ರಾಮಗಳಲ್ಲಿರುವ ದೇವರಿಗೆ ಸಮರ್ಪಣೆ ಮಾಡಲಾಗುವುದು. ನಂತರ ಪಂಜಿನ ಸೇವೆ, ಪ್ರಸಾದ ವಿನಿಯೋಗ ನಡೆಯಲಿದೆ. ಈ ಸಂದರ್ಭದಲ್ಲಿ ರಂಗನಾಥಸ್ವಾಮಿ, ಉಡುಸಲಮ್ಮ ದೇವಿಯರಿಗೆ ವಿಶೇಷವಾಗಿ ಬೆಳ್ಳಿ ಅಲಂಕಾರ ಮಾಡಲಾಗುತ್ತದೆ.

15 ರಂದು ರಾತ್ರಿ 8 ಗಂಟೆಗೆ ರಂಗನಾಥಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಜಾತ್ರೆ ಮೈದಾನದಲ್ಲಿ ‘ಹರಿಭಕ್ತ ಮಹಾಂದಾತ ಅಥವಾ ಲಕ್ಷ್ಮೀಶನಿದೇವರ ಪಂಥ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಹಿನ್ನೆಲೆ: 800 ವರ್ಷಗಳ ಹಿಂದೆ ಆಳ್ವಿಕೆ ನಡೆಸುತ್ತಿದ್ದ ಮಮಕರರಾಜ, ಈ ಗ್ರಾಮಕ್ಕೆ ಬಂದಾಗ ಇಲ್ಲಿನ ವೈಶಿಷ್ಟ್ಯ ಕಂಡು ಬೆರಗಾಗುತ್ತಿದ್ದ. ತಾನು ಬಂದ ದಾರಿ ಮರೆತು, ವಾಪಸು ತೆರಳದೇ ಉಳಿಯುತ್ತಿದ್ದ. ಹೀಗಾಗಿ ಈ ಗ್ರಾಮಕ್ಕೆ ಮರಸು ಎಂದು ಹೆಸರಿಡಲಾಯಿತು ಎಂದು ಪ್ರಾಚೀನ ದಾಖಲೆಗಳಲ್ಲಿ (ಕುರುಹುರಟ್ಟು) ಹೇಳಲಾಗಿದೆ.

ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತಿರುವ ಗಣಪತಿ, ಪೂರ್ವಕ್ಕೆ ಮುಖ ಮಾಡಿ ನಿಂತಿರುವ ಕಲ್ಲೇಶ್ವರ, ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವ ಗರುಡದೇವರ ಗುಡಿ, ಗಣಪತಿ ದೇವಾಲಯದ ಎದುರಿಗಿರುವ ಕರಿಗಲ್ಲು, ಕಲ್ಲೇಶ್ವರ ದೇವಾಲಯದ ಎಡ ಭಾಗದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತಿರುವ ಕಾಲಭೈರವೇಶ್ವರ ಮೂರ್ತಿ, ಮುಂಭಾಗದಲ್ಲಿ ಕೊತ್ತಲರಾಮಪ್ಪ ದೇವರ ಗುಡಿ, ಕುದುರೆ ಸಮಾಧಿ, ಪಕ್ಕದಲ್ಲಿ ಊರಿನ ದ್ವಾರ ಬಾಗಿಲು, ಎದುರಿಗಿರುವ ಕಲ್ಯಾಣಿ ಕೊಳ, ಗರುಡಗಂಬದ ಎದುರು ಒಂದು ಕಿ.ಮೀ. ದೂರದಲ್ಲಿ ಯಾಸನ ತೋಳು ಇದೆ. ವಿಶೇಷವೆಂದರೆ ಗರುಡಗಂಬ ಇಲ್ಲಿ ಹೊರತುಪಡಿಸಿದರೆ ಉತ್ತರ ಪ್ರದೇಶ ಕಾಶಿಯಲ್ಲಿದೆ.

ದಕ್ಷಿಣ ಭಾರತದಲ್ಲಿ ಮರಸು ಐತಿಹಾಸಿಕ ಗ್ರಾಮವಾಗಿದೆ. ಈ ಗ್ರಾಮವನ್ನು ಪ್ರಾಚ್ಯವಸ್ತು ಇಲಾಖೆಗೆ ಸೇರಿಸಿ, ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ಮರಸು ಗ್ರಾಮಸ್ಥರು.

ಮರಸು ಗ್ರಾಮದಲ್ಲಿ ನಡೆಯುವ ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದ್ದು ಭಕ್ತರು ಶುಚಿತ್ವದೊಂದಿಗೆ ಶಾಂತಿ ಕಾಪಾಡಬೇಕು.
ಮಲ್ಲಿಕಾರ್ಜುನ ಆಲೂರು ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.