ಆಲೂರು: ಜಲಜೀವನ ಮಿಷನ್ ಯೋಜನೆಯಲ್ಲಿ ಪೈಪ್ ಅಳವಡಿಸಲು ರಸ್ತೆ ಬದಿ ಅಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದ ಕಾರಣ, ಅಲ್ಲಲ್ಲಿ ಚರಂಡಿಗೆ ಮಣ್ಣು ಕುಸಿದು ಗುಂಡಿಗಳಾಗಿವೆ. ಗುಂಡಿಗಳಲ್ಲಿ ಮಳೆ ನೀರು ನಿಂತು ಮಕ್ಕಳು ಶಾಲೆಗೆ ಓಡಾಡಲು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಅರೆಬರೆ ಕೆಲಸ ಮಾಡಿ ಕೈ ಬಿಡುವುದರಿಂದ ನಿತ್ಯ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಆಲೂರು-ಭೈರಾಪುರ ಮುಖ್ಯ ರಸ್ತೆಯಲ್ಲಿ ಮಸೀದಿ ವೃತ್ತದಿಂದ ಮರಸು ಕೂಡಿಗೆ ವರೆಗೆ ಒಂದು ಬದಿಯಲ್ಲಿ ಪೈಪು ಅಳವಡಿಸಲು ಭಾರಿ ಆಳದ ಗುಂಡಿ ತೆಗೆದು ಪೈಪು ಅಳವಡಿಸಿ ಮಣ್ಣು ಮುಚ್ಚಿದ್ದಾರೆ. ಇದೆ ರಸ್ತೆಯಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇದೆ. ಇಂದಿನಿಂದ ಶಾಲೆ ಪ್ರಾರಂಭವಾಗುತ್ತಿದೆ. ಶಾಲೆ ಕಾಂಪೌಂಡ್ ಬಳಿ ಭಾರಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ. ಮಕ್ಕಳು ಓಡಾಡುವುದು ಹೇಗೆ ಎಂಬ ಭಯ ಮತ್ತು ಚಿಂತೆ ಪೋಷಕರಲ್ಲಿ ಮೂಡಿದೆ.

ಪೈಪು ಅಳವಡಿಸಿ ಒಂದು ತಿಂಗಳಾಗಿರುವುದರಿಂದ ಕೂಡಲೆ ಸಮತಟ್ಟುಗೊಳಿಸಿ ಆ ಜಾಗಕ್ಕೆ ಸಿಮೆಂಟ್ ಇಂಟರ್ಲಾಕ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂಟರ್ಲಾಕ್ ಅಳವಡಿಸಿದರೆ ಹುಲ್ಲು, ಗಿಡಗಂಟಿ ಬೆಳೆಯುವುದಿಲ್ಲ. ರಸ್ತೆಯಲ್ಲಿ ಶುಚಿತ್ವವನ್ನು ಕಾಪಾಡಬಹುದು. ಇಲ್ಲದಿದ್ದರೆ ಕಸಕಡ್ಡಿ ಬೆಳೆದು ಕೊಳಚೆ ಸಂಗ್ರಹವಾಗಿ ಶಾಲಾ ಮಕ್ಕಳಿಗೆ ರೋಗಗಳು ಎಡತಾಕುವ ಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-36-253012117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.