ಆಲೂರು: ತಾಲ್ಲೂಕಿನಲ್ಲಿ ಸುಮಾರು 2-3 ತಿಂಗಳಿನಿಂದಲೂ ಸರ್ವರ್ ಸಮಸ್ಯೆಯಿಂದಾಗಿ ಕಂದಾಯ, ನೋಂದಣಿ ಇಲಾಖೆ ಸೇರಿದಂತೆ ಹಲವು ಸಾರ್ವಜನಿಕ ಕೆಲಸಕ್ಕೆ ಅಡಚಣೆಯಾಗಿದ್ದು, ಜನಸಾಮಾನ್ಯರು ಇಲಾಖೆಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧ ಕೊಠಡಿಯಲ್ಲಿರುವ ಸರ್ವರ್ ಕೇಂದ್ರವು, ಹೃದಯ ಭಾಗದಿಂದ ಸುಮಾರು 3 ಕಿ.ಮೀ. ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖೆ, ಉಪ ನೋಂದಣಿ, ಪೊಲೀಸ್ ಠಾಣೆ, ತಾಲ್ಲೂಕು ಸಮುದಾಯ ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ್ದಾಗಿದೆ. ಒಮ್ಮೆ ಸರ್ವರ್ ಡೌನ್ ಆದರೆ ಸರ್ಕಾರಿ ಸ್ವಾಮ್ಯದ ಇಷ್ಟೂ ಇಲಾಖೆಗಳಲ್ಲಿ ಕಂಪ್ಯೂಟರ್ ಮೂಲಕ ಆಗಬೇಕಾದ ಕೆಲಸಗಳು ಸ್ಥಗಿತ ಗೊಳ್ಳುತ್ತವೆ.

ಸದ್ಯ ಸರ್ವರ್ಗೆ ಸಂಬಂಧಿಸಿದ ಸುಮಾರು 12 ಬ್ಯಾಟರಿಗಳು ಸಾಮರ್ಥ್ಯ ಕಳೆದುಕೊಂಡು ಸ್ತಬ್ಧಗೊಂಡಿವೆ. ಬ್ಯಾಟರಿಗಳು ಚಾಲ್ತಿಯಲ್ಲಿ ಇಲ್ಲದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಎಲ್ಲ ಕಚೇರಿಗಳಲ್ಲಿ ಕೆಲಸ ಸ್ತಬ್ಧಗೊಳ್ಳುತ್ತಿದೆ. ಪುನಃ ವಿದ್ಯುತ್ ಬಂದ ನಂತರ ಬ್ಯಾಟರಿಗಳು ಲೋಡ್ ಆದ ಮೇಲೆ ಅಂದರೆ, ಸುಮಾರು ಅರ್ಧ ಗಂಟೆ ನಂತರ ಕೆಲಸ ಮಾಡಬೇಕಾಗುತ್ತದೆ. ಈ ಕಾರಣದಿಂದ ಒಮ್ಮೆ ಸರ್ವರ್ ಅಡಚಣೆಯಾದರೆ ಕನಿಷ್ಠ ಒಂದು ಗಂಟೆ ಸಮಯ ವ್ಯರ್ಥವಾಗುತ್ತಿದೆ.

ಸುಮಾರು 2-3 ತಿಂಗಳಿನಿಂದ ತೊಂದರೆ ಎದುರಾಗಿದ್ದರೂ, ಸಂಬಂಧಿಸಿದ ಇಲಾಖೆ ಈವರೆಗೂ ಹೊಸ ಬ್ಯಾಟರಿಗಳನ್ನು ಅಳವಡಿಸದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಪ್ರತಿದಿನ ನೂರಾರು ಮಹಿಳೆಯರು, ವೃದ್ಧರು, ನಾಗರಿಕರು ಕಂದಾಯ ಇಲಾಖೆಗೆ ಅಲೆದು ಸುಸ್ತಾಗುತ್ತಿದ್ದಾರೆ.

ಪ್ರತಿಯೊಂದು ದಾಖಲೆಗಳನ್ನು ಪಡೆಯಬೇಕಾದರೆ ಕಂಪ್ಯೂಟರ್ ಮೂಲಕವೆ ಪಡೆಯಬೇಕು. ಸರ್ಕಾರ ಡಿಜಿಟಲ್ ವ್ಯವಸ್ಥೆ ಘೋಷಿಸಿದ್ದರೂ, ಸರ್ವರ್ ತೊಂದರೆಯಿಂದ ಜನಸಾಮಾನ್ಯರಿಗೆ ಉಪಯೋಗ ಆಗುತ್ತಿಲ್ಲ. ಕೂಡಲೆ ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

‘ಬ್ಯಾಟರಿಗಳನ್ನು ಬದಲಾಯಿಸಲು ಇಲಾಖೆ ಗಮನಕ್ಕೆ ತರಲಾಗಿದೆ. ಏಜೆನ್ಸಿಯವರು 8-10 ದಿನಗಳಲ್ಲಿ ಹೊಸ ಬ್ಯಾಟರಿ ಅಳವಡಿಸಲಿದ್ದಾರೆ. ಇಲಾಖೆ ಪ್ರಕ್ರಿಯೆಗಳಿಂದ ತಡವಾಗಿದೆ’ ಎಂದು ನೋಡಲ್ ಅಧಿಕಾರಿ ಸುನೀಲ್ಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-36-1574568713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.