ಆಲೂರು: ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಬೀದಿ ನಾಯಿಗಳನ್ನು ಬೋನುಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಸುತ್ತಲಿನ ಹಳ್ಳಿಗಳಲ್ಲಿದ್ದ ನೂರಾರು ಬೀದಿ ನಾಯಿಗಳು ಪಟ್ಟಣಕ್ಕೆ ಬಂದು ಹಗಲಿರುಳು ಜನರಿಗೆ ತೊಂದರೆ ನೀಡುತ್ತಿದ್ದವು. ವರ್ಷಕ್ಕೆ 2–3 ಬಾರಿ ಸಂತಾನೋತ್ಪತ್ತಿ ಮಾಡುತ್ತಿದ್ದುದರಿಂದ ಬೀದಿ ನಾಯಿಗಳ ಹಾವಳಿ ಅತಿಯಾಗಿತ್ತು. ಜನರು, ವಿದ್ಯಾರ್ಥಿಗಳು, ಮಕ್ಕಳು ಬೀದಿಯಲ್ಲಿ ತಿರುಗಾಡಲು ಭಯಪಡುವಂತಾಗಿತ್ತು.

ನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿದ್ದ ಸಂದರ್ಭದಲ್ಲಿ ಜನರಲ್ಲದೇ ಜಾನುವಾರುಗಳ ಮೇಲೆಯೂ ದಾಳಿ ಮಾಡುತ್ತಿದ್ದವು. ಈಗಾಗಲೇ ಅನೇಕ ಜನರಿಗೆ ಕಚ್ಚಿದ್ದು, ದನ ಕರುಗಳಿಗೂ ಕಚ್ಚಿ ಗಾಯಗೊಳಿಸಿದ್ದವು.

ಶಾಲೆ, ಕಾಲೇಜು, ಬಸ್ನಿಲ್ದಾಣ, ನ್ಯಾಯಾಲಯ, ರೈಲ್ವೆ ಸ್ಟೇಷನ್ ಸೇರಿದಂತೆ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಬೀದಿ ನಾಯಿಗಳು ಇರಬಾರದು ಎಂದು ನ್ಯಾಯಾಲಯ ಆದೇಶ ಮಾಡಿದೆ. ಅದರಂತೆ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಬೀದಿಗಳಲ್ಲಿ ಅಲೆದಾಡುತ್ತಿದ್ದ ನಾಯಿಗಳನ್ನು ಹಿಡಿದು ಸೊಪ್ಪಿನಹಳ್ಳಿ ಬಳಿ ಬೋನುಗಳಲ್ಲಿ ಬಂಧಿಸಿಡುತ್ತಿದ್ದಾರೆ. ಟೆಂಡರ್ದಾರರು ಈ ನಾಯಿಗಳಿಗೆ ಪ್ರತಿದಿನ ಊಟೋಪಚಾರ ಮಾಡುತ್ತಿದ್ದಾರೆ.

‘ಹಿಡಿದಿರುವ ನಾಯಿಗಳ ಪೈಕಿ ಈಗಾಗಲೇ 30 ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಅವುಗಳ ಆರೈಕೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದು ಅಧಿಕಾರಿಗಳು ಹೇಳಿದರು.

ಬೀದಿ ನಾಯಿಗಳ ಉಪಟಳದಿಂದ ಬೇಸತ್ತಿದ್ದ ಜನರು ಇದೀಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನಾಯಿಗಳನ್ನು ಹಿಡಿಯುತ್ತಿರುವುದರಿಂದ ಬೀದಿಗಳಲ್ಲಿ ಹಾವಳಿ ಸ್ವಲ್ಪ ಕಡಿಮೆಯಾಗಿದೆ.

55 ನಾಯಿಗಳನ್ನು ಹಿಡಿದು ಕೇಜ್ನಲ್ಲಿ ಇಡಲಾಗಿದ್ದು, ಶಸ್ತ್ರಚಿಕಿತ್ಸೆ ನಂತರ 6-8 ದಿನಗಳ ಕಾಲ ಆರೈಕೆ ಮಾಡಲಾಗುತ್ತದೆ. ನಂತರ ಅವುಗಳನ್ನು ಹಿಡಿದ ಜಾಗಕ್ಕೆ ತಂದು ಬಿಡಲಾಗುವುದು

–ಮಂಜುನಾಥ್, ಪ.ಪಂ. ಮುಖ್ಯಾಧಿಕಾರಿ

ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು ಉತ್ತಮ ಕೆಲಸ. ಇದರಿಂದ ಬೀದಿ ನಾಯಿ ಹಾವಳಿ ಕಡಿಮೆ ಆಗಲಿದೆ.

– ಅಸ್ಲಂ ಪಾಷಾ, ಉಪಾಧ್ಯಕ್ಷ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.