ಆಲೂರು: ತಾಲ್ಲೂಕಿನಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ಕೃಷಿ ಚಟುವಟಿಕೆ ಇನ್ನೂ ಆರಂಭವಾಗಿಲ್ಲ. ಜನವರಿಯಿಂದ ಇಲ್ಲಿಯವರೆಗೆ ವಾಡಿಕೆ ಮಳೆ 177 ಮಿ.ಮೀ ಆಗಬೇಕಾಗಿತ್ತು, ಆದರೆ ಕೇವಲ 11 ಮಿ.ಮೀ ಮಳೆ ಸುರಿದಿದ್ದು ಅನ್ನದಾತರ ಆತಂಕವನ್ನು ಹೆಚ್ಚಿಸಿದೆ.

ಸುಮಾರು ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ ಪ್ರತಿದಿನ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದರೂ ಮಳೆ ಸುರಿಯುತ್ತಿಲ್ಲ. ಮಂಗಳವಾರದಿಂದ ತುಂತುರು ಮಳೆಯಾಗುತ್ತಿದ್ದು, ಅದು ಯಾವುದಕ್ಕೂ ಸಾಲದಾಗಿದೆ. 60ರ ದಶಕದಿಂದೀಚೆಗೆ ಸುಮಾರು ಎರಡು ಬಾರಿ ಮಳೆಯಾಗದೆ ಬರಗಾಲ ಎದುರಾಗಿತ್ತು. ಆ ಪರಿಸ್ಥಿತಿ ಎದುರಾಗಲಿದೆಯೇ ಎಂಬ ಆತಂಕವೂ ಇದೆ.

ಈ ವೇಳೆಗೆ ರೈತರು ಭೂಮಿ ಹದ ಮಾಡಿ ಬಿತ್ತನೆ ಕಾರ್ಯ ಮುಗಿಯಬೇಕಾಗಿತ್ತು. ಕೊಳವೆ ಬಾವಿ ಹೊಂದಿರುವವರು ಮಾತ್ರ ಶುಂಠಿ ಬೆಳೆ ಬಿತ್ತನೆ ಮಾಡಿದ್ದಾರೆ. ದಿನದಿಂದ ದಿನಕ್ಕೆ ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಉಳಿದಂತೆ ಹೊಲ, ಗದ್ದೆಗಳು ಉಳುಮೆಯಾಗದೆ ಬೀಳು ಬಿಡುವ ವಾತಾವರಣ ಸೃಷ್ಟಿಯಾಗಿದೆ.

ಪ್ರತಿ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಭೂಮಿ ಹದದಿಂದ ಕೂಡಿ ರೈತರು ಬೆಳೆ ಬಿತ್ತನೆ ಮಾಡುತ್ತಿದ್ದರು. ಈ ವೇಳೆಗಾಗಲೆ ಬಿತ್ತನೆ ಕಾರ್ಯ ಮುಗಿಯುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗದೆ ಮಾಗಿ ಉಳುಮೆ ಮಾಡದೆ ರೈತರು ಕಂಗಾಲಾಗಿದ್ದಾರೆ.

ಸಕಾಲಕ್ಕೆ ಮಳೆಯಾಗಿದ್ದರೆ ಯಂತ್ರ ಬಳಸಿಯಾದರೂ ಕೃಷಿ ಮಾಡಲು ರೈತರು ಮುಂದಾಗುತ್ತಿದ್ದರು. ಆದರೆ ಮಳೆಯಾಗದೆ ರೈತರ ಬದುಕು ಮೂರಾಬಟ್ಟೆಯಾಗಿದೆ. ಮಳೆ, ಬೆಳೆಯಿಲ್ಲದೆ ದಿನದ ಬದುಕು ಸಾಗಿಸಲು ಕೆಲ ಕುಟುಂಬಗಳು ಕಷ್ಟಪಡುವಂತಾಗಿದೆ.

ಹವಾಮಾನ ವೈಪರೀತ್ಯದ ಪರಿಣಾಮ ಗ್ರಾಮೀಣ ಪ್ರದೇಶದ ಕೆಲ ಯುವಕರು ಕೆಲಸ ಅರಸಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ಸೇರಿದ್ದಾರೆ. ಗ್ಯಾರಂಟಿ ಯೋಜನೆಯಿಂದಾಗಿ ಕಾರ್ಮಿಕರ ಅಭಾವ ವಿಪರೀತವಾಗಿದೆ. ಕೆಲ ರೈತರು ಕೃಷಿ ಮಾಡುವುದನ್ನು ಕೈ ಬಿಟ್ಟಿದ್ದಾರೆ.

ಪ್ರತಿಯೊಬ್ಬರೂ ಕೈ ಜೋಡಿಸಿ ಕೃಷಿ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಉಳಿಯುತ್ತದೆ ಎನ್ನುತ್ತಾರೆ ಕೆಲ ರೈತರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-36-838355545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.