ಆಲೂರು: ತಾಲೂಕು ಕೇಂದ್ರದ ಸನಿಹದಲ್ಲಿ ಮೀನುಮರಿ ಪಾಲನ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪಟ್ಟಣದಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಇಲಾಖೆ ವತಿಯಿಂದ ರಾಜ್ಯ ವಲಯ ಮತ್ತು ಜಿಲ್ಲಾ ವಲಯ (ಎಸ್.ಸಿ.ಪಿ/ಟಿ.ಎಸ್.ಪಿ) ಯೋಜನೆಯಡಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ, 22 ವೃತ್ತಿನಿರತ ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕೆ ಸಲಕರಣೆ ಕಿಟ್ ಮತ್ತು ಹರಿಗೋಲು ವಿತರಿಸಿ ಮಾತನಾಡಿದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 800 ಕೆರೆಗಳಿವೆ. ಕೆರೆಗಳಲ್ಲಿ ಮೀನು ಸಾಕಲು ಹಾಸನ, ಸಕಲೇಶಪುರ ಇತರೆಡೆಯಲ್ಲಿ ಮೀನು ಮರಿಗಳನ್ನು ತಂದು ಕೆರೆಗಳಿಗೆ ಬಿಡಬೇಕಾಗಿದೆ. ಸ್ಥಳೀಯವಾಗಿ ಘಟಕವನ್ನು ಸ್ಥಾಪಿಸಿದರೆ ವೆಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ಮೀನುಮರಿ ಪಾಲನ ಕೇಂದ್ರಕ್ಕೆ ಅಗತ್ಯವಿರುವ ಜಾಗವನ್ನು ಗುರುತಿಸಬೇಕೆಂದು ಸೂಚಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡಿ, ತಾಲ್ಲೂಕಿನಲ್ಲಿ ಇಲಾಖೆಗೆ ಸೇರಿದ ದೊಡ್ಡ ಕೆರೆಗಳಿವೆ. ಈ ಕೆರೆಗಳಲ್ಲಿ ಮೀನು ಸಾಕಲಾಗಿದೆ. ಪ್ರತಿ ವರ್ಷ ಹರಾಜು ಮೂಲಕ ಮಾರಾಟ ಮಾಡಲಾಗುವುದು. ತಾಲ್ಲೂಕು ಕೇಂದ್ರದಲ್ಲಿ ಮೀನು ಪಾಲನ ಕೇಂದ್ರವಾದರೆ ಹೆಚ್ಚು ಮೀನುಗಾರಿಕೆ ನಡೆಸಲು ಅನುಕೂಲವಾಗುತ್ತದೆ ಎಂದರು.

ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.