ಆಲೂರು: ಇಲ್ಲಿನ ಸರ್ಕಾರಿ ಉರ್ದು ಶಾಲೆ ಮುಂಭಾಗದಲ್ಲಿನ ಗುಂಡಿಗಳನ್ನು ಕೆಯುಡಬ್ಲ್ಯುಎಸ್ ಸಿಬ್ಬಂದಿ ಸೋಮವಾರ ಮುಚ್ಚಿದರು. ಮಣ್ಣನ್ನು ಸರಿಸಿದ ಅವರು ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಟ್ಟರು.

ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ಸಿಬ್ಬಂದಿ ಶಾಲೆ ಕಾಂಪೌಂಡ್ ಬಳಿ ಬೆಳೆದಿದ್ದ ಗಿಡ ಗಂಟಿ ತೆರವುಗೊಳಿಸಿ ಚರಂಡಿಯನ್ನು ಶುಚಿಗೊಳಿಸಿದರು. ಜೆಸಿಬಿ ಯಂತ್ರ ಬಳಸಿ ಮಣ್ಣನ್ನು ಸಮತಟ್ಟು ಮಾಡಿ ರಸ್ತೆ ಮೇಲೆ ಬಿದ್ದ ನೀರು ಸರಾಗವಾಗಿ ಚರಂಡಿಗೆ ಹರಿಯುವಂತೆ ಮಾಡಲಾಗುವುದು ಎಂದು ಕೆಯುಡಬ್ಲುಎಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಗುಂಡಿಗಳಲ್ಲಿ ನೀರು: ಸಂಚಾರ ದುಸ್ತರ’ ಎಂಬ ಶೀರ್ಷಿಕೆಯಡಿಯಲ್ಲಿ ಸೋಮವಾರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಪ.ಪಂ. ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಕೆಯುಡಬ್ಲುಎಸ್ ಇಲಾಖೆ ಅಧಿಕಾರಿಗಳು ವರದಿಗೆ ಸ್ಪಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-36-314177197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.